ಮೈಸೂರು: ಆನ್‌ಲೈನ್ ನಲ್ಲಿ ಬರುವ ಕರೆಗಳು,ಮೆಸೇಜ್ ಗಳನ್ನು ನಂಬಿ ಮೋ ಹೋಗಬೇಡಿ,ವಂಚಕರು ಇರುತ್ತಾರೆ ಎಂದು ಸೈಬರ್ ಕ್ರೈಮ್ ನವರು,ಬ್ಯಾಂಕುಗಳು ಪದೇ,ಪದೇ ಎಚ್ಚರಿಕೆ ಕೊಟ್ಟರೂ ಹೆಚ್ಚು ಓದಿದವರೇ ಮೋಸಹೋಗುತ್ತಿದ್ದಾರೆ.ಇದಕ್ಕೆ ಮೈಸೂರಿನಲ್ಲಿ ಉದಾಹರಣೆ ಇದೆ.
ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಗೆ ಆನ್ ಲೈನ್ ಮೂಲಕ ವಂಚಕರು ವಂಚಿಸಿ 1.52 ಕೋಟಿ ಪಂಗನಾಮ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗಾಯತ್ರಿಪುರಂ ನಿವಾಸಿ ಹಾಗೂ ಕನಕದಾಸನಗರದ ನಿವಾಸಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಖದೀಮರು 1.52 ಕೋಟಿ ರೂ ವಂಚನೆ ಮಾಡಿದ್ದಾರೆ.
ಹೆಚ್ಚಿನ ಹಣದ ಆಸೆಗೆ ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.
ವಂಚಕರು ಇನ್ ಸ್ಟಾಗ್ರಾಂ ಮೂಲಕ ಷೇರು ಮಾರುಕಟ್ಟೆಯ ವಿಡಿಯೋ ಪ್ರದರ್ಶನ ಮಾಡಿದ್ದಾರೆ.ಇದನ್ನು ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ನಂಬಿ ಮೆಸೇಜ್ ಮಾಡಿದಾಗ ಆಪ್ಸ್ ಟಾಕ್ಸ್ ವ್ಯಾಲ್ಯೂ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಮಾಡಿದ್ದಾರೆ.
ಆರಂಭದಲ್ಲಿ ಲಾಭ ತೋರಿಸಿದ ವಂಚಕರು ನಂತರ ಹಂತ-ಹಂತವಾಗಿ ಹಣ ಪಡೆದು ವಂಚಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಂತ ಹೇಳಿ 11.80 ಲಕ್ಷ ರೂಗಳನ್ನು ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಲಾಗಿದೆ.
ಮುಂಬೈ ಪೊಲೀಸ್ ಅಂತ ನಿವೃತ್ತ ಅಧಿಕಾರಿಗೆ ಕರೆ ಮಾಡಿದ ವಂಚಕರು ಕೆಲವು ಅಪರಾಧ ಕೃತ್ಯದಲ್ಲಿ ನೀವು ಭಾಗಿಯಾಗಿದ್ದೀರಿ. ನಿಮ್ಮ ಖಾತೆಗಳನ್ನ ಸೀಜ್ ಮಾಡಲಾಗುವುದು ಎಂದು ಎಂದು ಬೆದರಿಕೆ ಹಾಕಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರುಗಳು ದಾಖಲಾಗಿದೆ.