ಮೈಸೂರು: ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದಾಗಿ ಬಂದ ಮೆಸೇಜ್ ನಂಬಿದ ವೃದ್ದರೊಬ್ಬರು 21 ಲಕ್ಷ ರೂ ಕಳೆದುಕೊಂಡ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಯಾದವಗಿರಿ ವಿವೇಕಾನಂದ ರಸ್ತೆಯ ಗೌಸ್ (76) ಎಂಬುವರು ಹಣ ಕಳೆದುಕೊಂಡ ವೃದ್ದರು.
ಎರಡು ದಿನಗಳ ಹಿಂದೆ ಕ್ರಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದಾಗಿ ಗೌಸ್ ಅವರ ಮೊಬೈಲ್ ಗೆ ಎಸ್ ಎಂ ಎಸ್ ಬಂದಿದೆ.ಇದನ್ನ ನಂಬಿದ ಗೌಸ್ ತಮ್ಮ ಇಮೇಲ್,ಕ್ರೆಡಿಟ್ ಕಾರ್ಡ್ ನಂ,ಜನ್ಮದಿನಾಂಕ ವಿವರಗಳನ್ನ ನೀಡಿದ್ದಾರೆ.
ಅದೇ ಸಮಯದಲ್ಲಿ ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ನಿಂದ 1,00,485 ರೂ ಡ್ರಾ ಮಾಡಿದ್ದಾರೆ.ತಕ್ಷಣವೇ ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ.
ಆದರೆ ಕಿಲಾಡಿಗಳು ಐಡಿಎಫ್ ಸಿ ಬ್ಯಾಂಕ್ ಖಾತೆಯಲ್ಲಿದ್ದ 20 ಲಕ್ಷ ಹಣವನ್ನೂ ಸಹ ಡ್ರಾ ಮಾಡಿದ್ದಾರೆ.ವಂಚನೆಗೆ ಒಳಗಾದ ಗೌಸ್ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.