ಅ.28 ರಂದು ನಟ ಎಸ್ ಜಯಪ್ರಕಾಶ್ ಅವರ ಹುಟ್ಟುಹಬ್ಬ:ವಿಶೇಷ ‌ಪೂಜೆ

Spread the love

ಮೈಸೂರು: ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರು ಹಾಗೂ ಭಗೀರಥ ಚಲನಚಿತ್ರದ ನಾಯಕ ನಟ ಎಸ್ ಜಯಪ್ರಕಾಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇದೇ‌ ಅ.28 ರಂದು ಬೆಳಗ್ಗೆ 10.30 ಕ್ಕೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚನೆ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಜೆ.ಪಿ.ಅಭಿಮಾನಿ ಬಳಗದ ತೇಜೇಶ್ ಲೋಕೇಶ್ ಗೌಡ, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ಅಶೋಕ್, ಕಿಶೋರ್, ರಘು ಅರಸ್ ಮಾಹಿತಿ ನೀಡಿದರು.

ದೇವಾಲಯದಲ್ಲಿ ಪೂಜೆ ಸಲ್ಲಿಸಿ ಎಸ್ ಜಯಪ್ರಕಾಶ್ ಅವರ ಜನುಮ ದಿನ ಆಚರಿಸಿ,ನಂತರ‌ ಡಾ ರಾಜಕುಮಾರ್ ಪಾರ್ಕ್ ಗೆ ತೆರಳಿ ಮಾಲಾರ್ಪಣೆ ಮಾಡಲಾಗುವುದು
ಎಂದು ಹೇಳಿದರು.

ಜಯಪ್ರಕಾಶ್ ಅವರಿಗೆ ಶುಭ ಹಾರೈಸಲು ಆಗಮಿಸುವ ಸ್ನೇಹಿತರು, ಅಭಿಮಾನಿಗಳಿಗೆ ಸಿಹಿ, ಫಲ, ಫಲಹಾರ ವಿತರಿಸಲಾಗುವುದು. ಜೊತೆಗೆ ಮೈಸೂರಿನ ಸುಮಾರು 8 ಅನಾಥಾಶ್ರಮ, ವೃದ್ಧಾಶ್ರಮ ಗಳಿಗೆ ಹಣ್ಣು ಹಂಪಲು ಮತ್ತು ಊಟ ವಿತರಿಸಲಾಗುವುದು ಎಂದು ತೇಜೇಶ್ ಲೋಕೇಶ್ ಗೌಡ ತಿಳಿಸಿದರು.

ಬೆಂಗಳೂರಿನ‌ ಗಾಳಿ ಆಂಜನೇಯಸ್ವಾಮಿ ದೇವಾಲಯ ಮತ್ತು ‌ಚಾಮರಾಜಪೇಟೆ ಶ್ರೀ ಮಹದೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎಸ್.ಅಶೋಕ್ ಹೇಳಿದರು.