ಅ.14,15 ರಂದು ಅಂತಾರಾಷ್ಟ್ರೀಯ ಮಟ್ಟದ ಬೌದ್ಧಮಹಾ ಸಮ್ಮೇಳನ

Spread the love

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷ ಸಂದ ಹಿನ್ನೆಲೆಯಲ್ಲಿ ಮಾನವ ಮೈತ್ರಿಯ ಪಯಣ ಆಶಯದೊಂದಿಗೆ ಅಕ್ಟೋಬರ್ 14 ಮತ್ತು 15ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೌದ್ಧಮಹಾ ಸಮ್ಮೇಳನವನ್ನು ಆಯೋ ಜಿಸಲಾಗಿದೆ ಎಂದು ಉರಿಲಿಂಗಿಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು ‌

ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್ ವಾದಿ ಸಂಘಟನೆಗಳು, ವಿಶ್ವಮೈತ್ರಿ ಬುದ್ಧ ವಿಹಾರದ ಸಂಯುಕ್ತಾ ಶ್ರಯದಲ್ಲಿ 2 ದಿನಗಳ ಬೌದ್ಧ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಈ ಸಮ್ಮೇಳನದಲ್ಲಿ 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಎರಡು ದಿನ ನಡೆಯುವ ಈ ಬೌದ್ಧ ಸಮ್ಮೇಳನ ಅಂಬೇಡ್ಕರ್ ಅವರು ಕಂಡ ಕನಸ್ಸನ್ನು ಈಡೇರಿಸಲು ಮತ್ತು ಎಲ್ಲಾ ಸಮಾಜದ, ಧರ್ಮದ, ವರ್ಗಗಳ ಜನರನ್ನು ಒಳಗೊಂಡ ಕಾರ್ಯಕ್ರಮ ಇದು ಎಂದು ತಿಳಿಸಿದರು.

ಬೌದ್ಧ ಧಮ್ಮ ಪುನರುತ್ಥಾನಕ್ಕಾಗಿ ಈ ಸಮ್ಮೇಳನ ಆಯೋಜಿಸಿದ್ದೇವೆ ಎಂದು ಹೇಳಿದರು.

ನಾಲ್ಕು ವೇದಿಕೆಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಖ್ಯಾತ ಸಾಹಿತಿಗಳು ಮತ್ತು ಹೋರಾಟಗಾರರಾದ ಕಾಂಚಾ ಈಳಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ರಹ ಮತ್ ತರೀಕೆರೆ, ಬಂಜಗೆರೆ ಜಯ ಪ್ರಕಾಶ್, ಪ್ರೊ.ಅಪ್ಪಗೆರೆ ಸೋಮಶೇಖರ್, ಕೆ.ದೀಪಕ್, ನಾಗಸಿದ್ಧಾರ್ಥ ಹೊಲೆಯಾರ್, ಹೆಚ್.ಎಸ್.ಅನುಪಮಾ, ಅಶೋಕ್, ಪ್ರೊ.ಸೋಸಲೆ ಚಿನ್ನಸ್ವಾಮಿ, ಮಲ್ಲಿ ಕಾರ್ಜುನ ಕನಕಪುರ, ಸೋಸಲೆ ಗಂಗಾ ಧರ್, ಅಮೃತ ಅತ್ರಾಡಿ, ವಡ್ಡಗೆರೆ ನಾಗ ರಾಜಯ್ಯ, ಡಾ.ವಿಠಲ್ ವಗ್ಗನ್, ಪ್ರೊ.ಸೋಮ್ ಶೇಖರ್, ಡಾ.ಎಚ್.ಟಿ. ಪೋತೆ, ಪ್ರಕಾಶ್ ರಾಜ್, ತಲಕಾಡು ರಂಗೇಗೌಡ, ಹರ್ಷ ಕುಮಾರ್ ಕುಗ್ಡೆ, ಡಾ.ಕೃಷ್ಣಮೂರ್ತಿ ಚಮರಂ, ಡಾ.ಶಿವಕುಮಾರ, ಜಯದೇವಿ ತಾಯಿ ಲಿಗಾಡೆ, ಚೇತನ್ ಅಹಿಂಸಾ, ಪ್ರೊ.ಹರಿರಾಮ್, ಡಾ.ಜಿ.ಶ್ರೀನಿವಾಸ್, ಡಾ.ಹ.ರಾ. ಮಹೇಶ್, ಡಾ.ನಟರಾಜ್ ಬೂದಾಳ್, ಧರಣಿದೇವಿ ಮಾಲಗತ್ತಿ ಮತ್ತಿತರರು ವಿವಿಧ ಗೋಷ್ಠಿಗಳಲ್ಲಿ ಭಾಗ ವಹಿಸಿ ವಿಚಾರ ಮಂಡಿಸಲಿದ್ದಾರೆ ಎಂದು ವಿವರಿಸಿದರು.

ಅ.15ರಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಸ್ತುಪ್ರದರ್ಶನ, ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ ಎಂದು ಪುರುಷೋತ್ತಮ್ ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಎರಡು ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣ ಮೂರ್ತಿ ಮಾತನಾಡಿ, ಜಾತಿ ವ್ಯವಸ್ಥೆ, ಅಸಮಾನತೆ ಕೊನೆಗಾಣಬೇಕಾದರೆ ಎಲ್ಲರೂ ಬುದ್ಧ ಮಾರ್ಗದಲ್ಲಿ ಸಾಗಬೇಕು. ಬುದ್ಧರು ತೋರಿದ ಮಾನವೀಯ ಮಾರ್ಗ ದಲ್ಲಿ ನಡೆಯಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೌದ್ಧ ಬಿಕ್ಕು ಕಲ್ಯಾಣ ಸಿರಿ ಬಂತೇಜಿ, ಮಾತೇಗೌತಮಿ, ಮುಖಂಡ ರಾದ ಸಿದ್ದರಾಜು, ಮಹೇಶ್, ಬಿಲ್ಲಯ್ಯ ಬಸವರಾಜು, ಸೋಮಯ್ಯ, ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.