ಯುವಸಂಭ್ರಮದಲ್ಲಿ ಕಳೆಗಟ್ಟಿದ ನೃತ್ಯಗಳ ಸೊಬಗು

Spread the love

ಮೈಸೂರು,ಅಕ್ಟೋಬರ್‌.1: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ 7ನೇ‌ ದಿನದ ನೃತ್ಯ ಸೊಬಗು ಕಳೆಗಟ್ಟಿತ್ತು.

ಮೈಸೂರಿನ ಜೆ ಎಸ್ ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಲಾತಂಡದವರು ಮಾಡಿದ ಮಹಿಷ ಮರ್ದಿನಿ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು, ಹೆಚ್ ಡಿ ಕೋಟೆ ತಾಲ್ಲೂಕಿನ ವಿದ್ಯಾ ಸಿಂಚನ ಪದವಿ ಪೂರ್ವ ಕಾಲೇಜು ತಂಡದವರು ಕರ್ನಾಟಕ ಜಾನಪದ ವೈವಿಧ್ಯತೆಯ ಕುರಿತು ನೃತ್ಯವನ್ನು ಪ್ರದರ್ಶಿಸಿದರು.

ಕೆ ಆರ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದವರ ನೃತ್ಯ ಪ್ರದರ್ಶನ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು.

ಮೈಸೂರಿನ ಡಿ ಪೌಲ್ ಕಾಲೇಜು ತಂಡದ ನವದುರ್ಗಿ ನವವೈಭವ ನೃತ್ಯ ಪ್ರದರ್ಶನ ಅದ್ಭುತ ವಾಗಿತ್ತು, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದ ಶಿವ ತಾಂಡವ ನೃತ್ಯ ಜನರ ಚಪಾಳೆಯನ್ನು ಗಿಟಿಸಿಕೊಂಡಿತು.

ಬೆಂಗಳೂರಿನ ವಿವಿಎನ್ ಪದವಿ ಪೂರ್ವ ಕಾಲೇಜಿನ ತಂಡದವರು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವನಕೆ ಒಬ್ಬವ ಕುರಿತಾದ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ 57 ನೃತ್ಯ ‌ಪ್ರದರ್ಶನಗಳನು ಮಾಡಲಾಯಿತ್ತು. ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಜಾನಪದ ಕಲೆ ಮತ್ತು ನೃತ್ಯ, ಭಾರತೀಯ ಯೋಧರ ಪಾತ್ರ, ದೇಶ ಭಕ್ತಿ ಹೋರಾಟಗಾರರ ಕೊಡುಗೆ,ಕರ್ನಾಟಕ ಪೊಲೀಸರು ಯೋಧ ಮತ್ತು ರೈತ, ಏಕತೆ ಮತ್ತು ಪರಂಪರೆ, ಮೊಬೈಲ್ ನಿಂದ ಪುಸ್ತಕದೆಡೆಗೆ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಾದಕ ವ್ಯಸನ ಮುಕ್ತ ಸಮಾಜ, ಸೇರಿದಂತೆ ವಿವಿಧ ಥೀಮ್ ಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.