ದರ್ಶನ್‌ ಗೆ ಇಂದೂ ಸಿಗಲಿಲ್ಲ ಬೇಲ್

Spread the love

ಬೆಂಗಳೂರು: ಬಹಳ ಕಾತುರದಿಂದ ಕಾಯುತ್ತಿದ್ದ ನಟ ದರ್ಶನ್‌‌ ಮತ್ತು ಅವರ ಲಕ್ಷಾಂತರ‌ ಅಭಿಮಾನಿಗಳಿಗೆ ಇಂದು ತೀವ್ರ ನಿರಾಸೆಯಾಗಿದೆ.

ದರ್ಶನ್ ಗೆ ಸಿಟಿ ಸಿವಿಲ್‌ ಕೋರ್ಟ್‌‌ನಲ್ಲಿ ಜಾಮೀನು ಸಿಗಲಿಲ್ಲ, ಇವತ್ತು ಹೈಕೋರ್ಟ್‌‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಗೆ ಬಂದಿತು.

ಬೆನ್ನುನೋವಿನ ಕಾರಣ ಕೊಟ್ಟು ಜಾಮೀನು ನೀಡಬೇಕೆಂದು ದರ್ಶನ್ ಪರ‌ ವಕೀಲ‌ ಸಿ.ವಿ.ನಾಗೇಶ್ ಮನವಿ ಮಾಡಿದರು.

ಆದರೆ ಹೈಕೋರ್ಟ್‌‌ ಬೆನ್ನು ನೋವಿನ ಕುರಿತು ಆಸ್ಪತ್ರೆಯ‌ ವರದಿ ನೀಡಬೇಕೆಂದು ಸೂಚಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಹಾಗಾಗಿ ದರ್ಶನ್‌‌ ರನ್ನ ಬಳ್ಳಾರಿ ಬಿಮ್ಸ್‌‌ ಆಸ್ಪತ್ರೆಗೆ ಶಿಫ್ಟ್‌ ಮಾಡಿರುವ ಪೊಲೀಸರು ಎಂ ಆರ್ ಐ ಸ್ಕ್ಯಾನ್‌‌ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.