ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು,
ಶನಿವಾರ ಕೋರ್ಟ್ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಿತು.
ಆದರೆ ಸತತ ನಾಲ್ಕು ಗಂಟೆಗಳ ಕಾಲ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರೂ ಕೂಡಾ ನಟ ದರ್ಶನ್ಗೆ ಬೇಲ್ ಸಿಗಲಿಲ್ಲ.
ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು, ತನಿಖೆಯಲ್ಲಿ ಪೊಲೀಸರು ಮಾಡಿದ ತಪ್ಪುಗಳನ್ನು ಪ್ರಶ್ನೆ ಮಾಡಿದ್ದು, ತನಿಖೆ ತಡವಾಗಿದ್ದು ಯಾಕೆ, ದರ್ಶನ್ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ವಾದ ಮಂಡಿಸಿದರು.ಜತೆಗೆ ಕೇಸ್ ತನಿಖೆಯ
ತಪ್ಪುಗಳ ಪಟ್ಟಿಯನ್ನು ಕೋರ್ಟ್ಗೆ ನೀಡಿದರು.
ಸಿ.ವಿ. ನಾಗೇಶ್ ಅವರು ವಾದ ಮುಗಿಸುತ್ತಿದ್ದಂತೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿದರು.
ಇಂದು ಬೇಲ್ ಸಿಗಬಹುದೆಂದು ಕಾಯುತ್ತಿದ್ದ ದರ್ಶನ್ಗೆ ನಿರಾಸೆ ಆಗಿದೆ,ಜೈಲಿನಲ್ಲೇ ಇರಬೇಕಿದೆ. ಇನ್ನು ಪವಿತ್ರಾ ಗೌಡಗೂ ಬೇಲ್ ಸಿಕ್ಕಿಲ್ಲ. ಸಿಟಿ ಸಿವಿಲ್ ಕೋರ್ಟ್, ಪವಿತ್ರಾಗೌಡ ಜಾಮೀನು ಅರ್ಜಿಯನ್ನು ಸಹ ಅಕ್ಟೋಬರ್ 8 ಕ್ಕೆ ಮುಂದೂಡಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ ಆಗಿದ್ದು,ಅಂದು ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ಪ್ರತಿವಾದ ಮಂಡಿಸಲಿದ್ದಾರೆ.