ನಿರ್ಮಲ-ಚೇತನ ಸಲಹಾ ಮನೆ ಉದ್ಘಾಟನೆ

Spread the love

ಮೈಸೂರು: ಮೈಸೂರಿನ ಆಲನಹಳ್ಳಿ ರಿಂಗ್ ರಸ್ತೆಯಲ್ಲಿರುವ ನಿರ್ಮಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿರ್ಮಲ-ಚೇತನ ಸಲಹಾ ಮನೆ ಉದ್ಘಾಟನೆ ಮಾಡಲಾಗಿದೆ.

ಇದು ಆಸ್ಪತ್ರೆಯ ಸಮಾಜಮುಖಿ ಕಾರ್ಯ ಕ್ರಮವಾಗಿದೆ. ಬದಲಾದ ಕಾಲದಲ್ಲಿ ಮಕ್ಕಳ ಕಲಿಕೆ ಇಳಿಮುಖವಾಗುವುದರೊಂದಿಗೆ ಉತ್ತಮವಾದ ಜ್ಞಾನ-ಕೌಶಲ-
ಮನೋಭಾವದ ಬೆಳವಣಿಗೆ ಶಾಲಾಶಿಕ್ಷಣದಿಂದ ನಡೆಯುತ್ತಿಲ್ಲ. ಜೀವನ ಕೌಶಲಗಳನ್ನೂ ಕಲಿತು, ಆತ್ಮವಿಶ್ವಾಸದ ಧೀಶಕ್ತಿಗಳಾಗಿ, ಪರಿಪೂರ್ಣ ವ್ಯಕ್ತಿತ್ವ ಪ್ರಜ್ವಲಿಸಿ ತಮ್ಮ ಕಾಲ ಮೇಲೆ ತಾವೇ ನಿಲ್ಲುವ ಶಕ್ತಿ ಗಳಿಸುವ ಶಿಕ್ಷಣ ಮಕ್ಕಳಿಗೆ ಬೇಕಾಗಿದೆ.

ಹಾಗಾಗಿ ರಾಜ್ಯದ ಮೊದಲ ಮಕ್ಕಳ ಸಲಹೆ ಮತ್ತು ತರಬೇತಿ ಕೇಂದ್ರವನ್ನು ಮೈಸೂರಿನಲ್ಲಿ ತಂದಿದ್ದೇವೆ ಎಂದು ವೈದ್ಯಕೀಯ ನಿರ್ದೇಶಕ ಡಾ.ಬಿ ಬಸವರಾಜು ತಿಳಿಸಿದರು.

ಮೈಸೂರಿನ ಹೆಸರಾಂತ ವ್ಯಕ್ತಿ ವಿಕಸನ ತರಬೇತು ದಾರರೂ 40 ವರ್ಷಗಳಿಂದ ಮಕ್ಕಳಿಗೆ ಸಲಹೆ-ತರಬೇತಿ ನೀಡಿ ರಾಜ್ಯ-ದೇಶದಲ್ಲಿ ಲಕ್ಷಾಂತರ ಮಕ್ಕಳ ‘ಅಧ್ಯಯನ-ಪರೀಕ್ಷಾ’ ಕೌಶಲ ಹೆಚ್ಚಿಸಿರುವ ರವಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಆರ್. ಎ.ಚೇತನ್ ರಾಮ್ ಅವರ ಮಾರ್ಗದರ್ಶನದಲ್ಲಿ ‘ನಿರ್ಮಲ-ಚೇತನ’ ಎಂಬ ಮಕ್ಕಳ-ವಿದ್ಯಾರ್ಥಿಗಳ ಅಧ್ಯಯನ – ಪರೀಕ್ಷೆ-ಶಿಕ್ಷಣ-ಬುದ್ಧಿಶಕ್ತಿ -ಮೌಲ್ಯ-ವ್ಯಕ್ತಿತ್ವ- ಕಲಿಕೆ- ನಡವಳಿಕೆ’ ಕುರಿತಾಗಿ ಸಲಹೆ ನೀಡಲಾಗುವುದು ಎಂದು ತಿಳಿಸಿದರು.

ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ.ಚೇತನ್ ರಾಮ್, ಆಸ್ಪತ್ರೆಯ ಕ್ವಾಲಿಟಿ ಮುಖ್ಯಸ್ಥ ಡಾ. ಮನುಪ್ರಕಾಶ್ ಹಾಗೂ ನಿರ್ಮಲ, ಮನುಪ್ರಸಾದ್, ಡಾಕ್ಟರ್ ಕೃಷ್ಣಕುಮಾರ್ ಈ ವೇಳೆ ಹಾಜರಿದ್ದರು.