ನಿಖಿಲ್ ಗೆಲುವಿಗೆ ಪ್ರಾರ್ಥಿಸಿ ತಾಯಿಚಾಮುಂಡೇಶ್ವರಿಗೆ ವಿಶೇಷ ಪೂಜೆ

Spread the love

ಮೈಸೂರು: ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹೆಚ್ಚು ಬಹುಮತಗಳಿಂದ ಗೆದ್ದು ವಿಧಾನಸಭೆಗೆ ಪ್ರವೇಶ ಮಾಡಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಮಾಡಲಾಯಿತು.

ಈ ವೇಳೆ ಕಾಯಿ ಒಡೆದು ವಿಶೇಷ ಪೂಜೆ ಮಾಡಿಸಲಾಯಿತು. ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೇಗೌಡ,ಶ್ರೀನಿವಾಸ್ ಹೆಚ್, ಧರ್ಮಪಾಲ್ ಗೌಡ,ಮೂರ್ತಿ,ರಮೇಶ್ ಸುಬ್ರಹ್ಮಣ್ಯ, ನಾಗರಾಜು, ಭಾಸ್ಕರ ಅಭಿಷೇಕ್, ಚಂದ್ರಶೇಖರ್, ವರುಣ ಜೆಡಿಎಸ್ ಅಧ್ಯಕ್ಷ ಬಾಲಕೃಷ್ಣ ಎಂ ಮುಂತಾದವರು ಹಾಜರಿದ್ದರು.