ಸರ್ಕಾರ ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ:ನಿಖಿಲ್

Spread the love

ನೆಲಮಂಗಲ: ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು
ಇಲ್ಲದಿದ್ದರೆ ಬೆಂಬಲ ಕೊಡುವ ಮೂಲಕ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.

ನೆಲಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು 4.5 ಲಕ್ಷ ಕೋಟಿ ಬಜೆಟ್ ಬಗ್ಗೆ ಮಾತನಾಡ್ತಾರೆ,ಬಹುಶಃ ಸರ್ಕಾರ 800 ಕೋಟಿ ವೇತನ ಪರಿಷ್ಕರಣೆಗೆ ಇಡಬೇಕಾಗುತ್ತದೆ ಎಂದು ಹೇಳಿದರು.

ಸುಮ್ಮನೆ ಲಕ್ಷಾಂತರ ಕೋಟಿ ಇದೆ ಅಂತ ಬೆನ್ನು ತಟ್ಟಿಕೊಳ್ಳೊದಲ್ಲ,
ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಬೇಕು ಈ ಹಿಂದೆ ನೀವೆ ಭಾಷಣ ಮಾಡಿದ್ದೀರಿ ಇವಾಗ ಹಣ ಬಿಡುಗಡೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನಿಖಿಲ್ ಒತ್ತಾಯಿಸಿದರು.

ಅಧಿಕಾರದಲ್ಲಿ ಇದ್ದಾಗ ಒಂದು ವರ್ತನೆ ವಿರೋಧ ಪಕ್ಷದಲ್ಲಿದ್ದ ಸಂಧರ್ಭದಲ್ಲಿ ಬೇರೆ ವರ್ತನೆ ಮಾಡುವುದು ಸರಿಯಲ್ಲ,
ಇದನ್ನೆಲ್ಲ ರಾಜ್ಯದ ಜನತೆ ನೋಡುತ್ತಿದ್ದಾರೆ
ಸಂಧರ್ಭದಲ್ಲಿ ಸರ್ಕಾರಕ್ಕೆ ಮಾನ,ಮರ್ಯಾದೆ ಇದ್ದರೆ ಮೊದಲಯ ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು

ಪಕ್ಷ ಸಂಘಟನೆ ಕುರಿತು ಮಾತನಾಡಿದ ಅವರು ಕಳೆದ 45 ದಿನಗಳಿಂದ ನಿರಂತರವಾಗಿ ಸಂಘಟನೆ ಸಾಗುತ್ತಿದೆ
ಇವತ್ತು ನೆಲಮಂಗಲದಲ್ಲಿ ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಬಹಳ ಯಶಸ್ವಿಯಾಗಿದೆ
ಎಂದು ತಿಳಿಸಿದರು.

ದೆಹಲಿಗೆ ತೆರಳುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ಮುಖಂಡರಗಳನ್ನ ಭೇಟಿ ಮಾಡುವ ಅವಶ್ಯಕತೆ ಇದೆ ಹಾಗಾಗಿ ಹೋಗುತ್ತಿದ್ದೇನೆ ಎಂದು ನಿಖಿಲ್ ಸ್ಪಷ್ಟಪಡಿಸಿದರು.