ಬೆಂಗಳೂರು: ಹೊಸ ವರ್ಷ ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ನೂತನ ವರ್ಷದ ಸಂಭ್ರಮಕ್ಕೆ ಬೆಂಗಳೂರಿನ ಪ್ರಮುಖ ರಸ್ತೆಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ನಗರದ ಬ್ರಿಗೇಡ್ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಾದ ಚರ್ಚ್ ಸ್ಟ್ರೀಟ್ ಮತ್ತಿತರ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.

ಬ್ರಿಗೇಡ್ ರಸ್ತೆಯ ಪ್ರತಿ ಶಾಪ್ ಗಳು,ಮಾಲ್ ಗಳು,ಅಂಗಡಿಗಳು,ಕಂಬಗಳು ಎಲ್ಲಾ ಕಡೆ ಬಣ್ಣದ ವಿದ್ಯುತ್ ತೋರಣಗಳು ಇತರೆ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿದ್ದು ಕಂಗೊಳಿಸುತ್ತಿವೆ.

ಅಂಗಡಿ ಮಳಿಗೆಯವರು ತಮ್ಮ, ತಮ್ಮ ಶಾಪ್ ಗಳ ಹೆಸರುಗಳನ್ನು ವಿದ್ಯುತ್ ನಿಂದ ಜಗಮಗಿಸುವಂತೆ ಮಾಡಿದ್ದು,ನೋಡಲು ಎರಡು ಕಣ್ಣು ಸಾಲದೆಂಬಂತಿದೆ.

ಪ್ರತಿ ವರ್ಷ ಬ್ರಿಗೇಡ್ ರಸ್ತೆಯಲ್ಲೆ ನ್ಯೂ ಇಯರ್ ಸೆಲೆಬ್ರೇಶನ್ ನಡೆಯೋದ್ರಿಂದ ಭದ್ರತೆಗಾಗಿ ಹೋಮ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ.

ಹೋಮ್ ಗಾರ್ಡ್ಸ್ ಅಧಿಕಾರಿಗಳು ಸಿಬ್ಬಂದಿಗೆ ಎಲ್ಲೆಲ್ಲಿ ಹೇಗೆ ನಿಗಾ ವಹಿಸಬೇಕೆಂದು ರಸ್ತೆಯಲ್ಲೇ ಸಲಹೆ, ಸೂಚನೆಗಳನ್ನು ನೀಡಿದರು.
ಒಟ್ಟಾರೆ ಹೊಸ ವರ್ಷಾಚರಣೆಗೆ ಬ್ರಿಗೇಡ್ ರೋಡ್ ಸಿದ್ದಗೊಂಡು ಯುವಜನತೆಯನ್ನು ಕೈ ಬೀಸಿ ಕರೆಯುತ್ತಿದೆ.