ಮಳವಳ್ಳಿ: ಮಳವಳ್ಳಿಯ ನ್ಯೂ ರೈನೋ ಕಿಡ್ ವರ್ಲ್ಡ್ ಶಾಲೆಯಲ್ಲಿ ಚಿಣ್ಣರ ಸಂತಸ ಸಂಭ್ರಮ ಮನೆ ಮಾಡಿತ್ತು.
ಕಾರಣ ಶ್ರೀ ಕೃಷ್ಣ ಜನ್ಮಾಷ್ಟಮಿ.ಶ್ರೀ ಕೃಷ್ಣ ಜನಿಸಿದ ದಿನವನ್ನು ಜನ್ಮಾಷ್ಟಮಿ ಎಂದು ಎಲ್ಲೆಡೆ ಆಚರಿಸಲಾಗುತ್ತದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಳವಳ್ಳಿಯ ನ್ಯೂ ರೈನೋ ಕಿಡ್ ವರ್ಲ್ಡ್ ಶಾಲೆಯಲ್ಲಿ ಪುಟಾಣಿಗಳು ರಾಧಾ-ಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸಿದರು.ಮಕ್ಕಳೊಂದಿಗೆ ಶಿಕ್ಷಕ ವರ್ಗ ಕೂಡಾ ಮಕ್ಕಳಂತೆ ಖುಷಿ ಪಟ್ಟರು.
