ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ

Spread the love

ನವದೆಹಲಿ: ಆದಾಯ ತೆರಿಗೆಗೆ ಸಂಬಂಧಿಸಿದ ಈಗಿರುವ ಕಾನೂನುಗಳನ್ನು ಸರಳೀಕರಿಸಲು ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇಂದು ಕೇಂದ್ರ ಬಜೆಟ್ ಮಂಡಿಸಿದ ಅವರು, ಹೊಸ ಆದಾಯ ತೆರಿಗೆ ಮಸೂದೆಯು ಕಾನೂನುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಾಡಲು ಮತ್ತು ಪುಟಗಳ ಸಂಖ್ಯೆಯನ್ನು ಶೇಕಡಾ 60ರಷ್ಟು ಕಡಿಮೆಗೊಳಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

‘ಮೊದಲು ನಂಬಿಕೆ ಇಡಿ, ನಂತರ ಪರಿಶೀಲಿಸಿ’ ಎಂಬ ಪರಿಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸರ್ಕಾರ ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲಿದೆ ಎಂದು ತಿಳಿಸಿದರು.

2025 ರ ಕೇಂದ್ರ ಬಜೆಟ್‌ನ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 13 ರವರೆಗೆ ನಿಗದಿಯಾಗಿದೆ.

ಹೊಸ ಆದಾಯ ತೆರಿಗೆ ಮಸೂದೆಯು ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿಯಲ್ಲ, ಸಂಪೂರ್ಣ ಹೊಸದಾಗಿದ್ದು, ಪ್ರಸ್ತುತ ಕರಡು ಕಾನೂನನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಸಚಿವೆ ಸ್ಪಷ್ಟ ಪಡಿಸಿದ್ದಾರೆ.