ಮೈಸೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಇಎಂಎಲ್ ಮ್ಯಾನೇಜರ್ ಮೋಹನ್ (54) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.
ಮೈಸೂರಿನ ಬೋಗಾದಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿದ್ದ ಮೋಹನ್ ಪ್ರತಿದಿನದಂತೆ ಭಾನುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು.
ಅದೇನಾಯಿತೊ ತಿಳಿಯದು ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದ ವಾಚ್‌ಮ್ಯಾನ್ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುವೆಂಪುನಗರ ಪೋಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.