ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತರ ವಯೋಮಿತಿಯನ್ನು ಸಡಿಲಿಸಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ನೆಲಮಂಗಲ ಅಂಬೇಡ್ಕರ್ ಭವನದಲ್ಲಿ ಮಾತೃಭೂಮಿ ಯುವಕ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಯೋಜಿಸಿದ್ದ
2024 ನೇ ಸಾಲಿನ ಕರ್ನಾಟಕ ಜಾನಪದ ಅಕಾಡಮಿ ರಾಜ್ಯ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆಯ್ಕೆಯಾದ ಸಿದ್ದಯ್ಯ ಸಿ ಹೆಚ್ ಅವರ ಅಭಿನಂದನಾ ಸಮಾರಂಭ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ವಯೋಮಿತಿ 60 ವರ್ಷಕ್ಕೆ ನಿಗದಿ ಮಾಡಿರುವುದನ್ನು ಸಡಿಲಿಸಿ 45 ವರ್ಷಕ್ಕೆ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರಶಸ್ತಿ ನೀಡಿ ಗೌರವಿಸುವುದರಿಂದ
ಕಲಾವಿದರಿಗೆ ಪ್ಪ್ರೋತ್ಸಾಹ ನೀಡಿದಂತಾಗುತ್ತದೆ ಹಾಗೂ ಕಲೆಯನ್ನು ಗೌರವಿಸುವಂತಾಗುತ್ತದೆ ಎಂದು ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ಮಾತನಾಡಿ, ಸಿದ್ದಯ್ಯ ಅವರ ಜನಪದ ಹಾಗೂ ರಂಗಭೂಮಿ ಸೇವೆಯನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಸಿದ್ದಯ್ಯ ಅವರಿಗೆ ಇನ್ನು ಅನೇಕ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.

ಜಾನಪದ ಅಕಾಡೆಮಿ ಸದಸ್ಯರಾದ ಹುಲಿಕುಂಟೆ ಮೂರ್ತಿ ಅವರು ಮಾತನಾಡಿ ನಾಲ್ಕು ಪದಗಳು ಬಂದಂತವರೆಲ್ಲ ಕಲಾವಿದರು ಎಂದು ಬಿಂಬಿಸಿಕೊಳ್ಳುವ ಕಾಲಘಟ್ಟಕ್ಕೆ ಬಂದುಬಿಟ್ಟಿದ್ದೇವೆ, ನೈಜ ಕಲಾವಿದರನ್ನು ಹೆಕ್ಕಿ ತೆಗೆಯುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಸಿದ್ದಯ್ಯ ಅವರು ಮಾತನಾಡಿ,ಈ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ, ಮುಂದಿನ ದಿನಗಳಲ್ಲಿ ಉಚಿತ ಜನಪದ ತರಬೇತಿ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಯುವಕರಿಗೆ ಜಾನಪದ ಜಾಗೃತಿ ಮೂಡಿಸಲಾಗುವುದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಜಾನಪದ ಎಂದೂ ನಶಿಸುವುದಿಲ್ಲ ಅದಕ್ಕೆ ತನ್ನದೇ ಆದಂತಹ ಶಕ್ತಿ ಇದೆ ಎಂದು ತಿಳಿಸಿದರು.
ವೇದಿಕೆರಿ ಸಿದ್ದಯ್ಯ ಹಾಗೂ ಅವರ ಶ್ರೀಮತಿ ಅವರಿಗೆ ಮಾತೃಭೂಮಿ ಯುವಕ ಸಂಘ ಸಿಂಚನ ಕಲಾ ಕೇಂದ್ರದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮಾತೃಭೂಮಿ ಯುವಕ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ಪವನ್ ಕುಮಾರ್ ನಾಯಕ್,ವಕೀಲರಾದ ಬೈಲಪ್ಪ,ಕಾರ್ಮಿಕ ನಿರೀಕ್ಷಕರು ನೆಲಮಂಗಲ ನಾಗರತ್ನ, ಡಾ ಗಂಗಾರಾಜು, ರುದ್ರ ನಾಯಕ್,ರಾಮು ವಿ, ನವೀನ್ ಕುಮಾರ್, ಚೇತನ್ ಕುಮಾರ್ ಉಪಸ್ಥಿತರಿದ್ದರು.