ಕರ್ತವ್ಯ ಲೋಪ;ದೇವರಾಜ ಠಾಣೆ ಎಸಿಪಿ ಸ್ಕ್ವಾಡ್ ನ ಸಿಬ್ಬಂದಿ ಅಮಾನತು

Spread the love

ಮೈಸೂರು: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ದೇವರಾಜ ಠಾಣೆ ಎಸಿಪಿ ಸ್ಕ್ವಾಡ್ ನ ಸಿಬ್ಬಂದಿ ಪ್ರದೀಪ್ ಎಂಬವರನ್ನು ಅಮಾನತುಪಡಿಸಲಾಗಿದೆ.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರದೀಪ್ ನನ್ನು ಅಮಾನತುಪಡಿಸಿ
ಆದೇಶ ಹೊರಡಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ದ ಸಮರ ಸಾರಿರುವ ಮೈಸೂರು ಪೊಲೀಸರ ಕಾರ್ಯಾಚರಣೆ ವೇಳೆ ಕೆಲವು ಮಾಹಿತಿಗಳು ತಿಳಿದಿದ್ದರೂ ಪ್ರದೀಪ್ ಮರೆಮಾಚಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಅಮಾನತು ಕ್ರಮ ಕೈಗೊಳ್ಳಲಾಗಿದೆ.