ನಜರ್ಬಾದ್ ನಟರಾಜ್ ಹುಟ್ಟುಹಬ್ಬ ಅರ್ಥಪೂರ್ಣ‌ ಆಚರಣೆ

Spread the love

ಮೈಸೂರು: ಮೈಸೂರಿನ ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಿಂದುಳಿದ ವರ್ಗದ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರಾಮಪ್ಪ ಅವರ ನೇತೃತ್ವದಲ್ಲಿ ಟೀಕೆ ಲೇಔಟಿನ ವಿಶೇಷ ಮಕ್ಕಳ ಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಕಲ್ಪಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಜತೆಗೆ ಯುವ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಅಗ್ರಹಾರದಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ಆರ್ ಮೂರ್ತಿ ನೇತೃತ್ವದಲ್ಲಿ ಬೃಹತ್ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದರು.

ಈ ವೇಳೆ ಕಾಂಗ್ರೆಸ್ ನಗರಧ್ಯಕ್ಷ ಆರ್ ಮೂರ್ತಿ, 47ನೇ ವಾರ್ಡ್ ರಮೇಶ್ ರಾಮಪ್ಪ, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ಭರತ್, ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾಧ್ಯಕ್ಷ ಜಿ ರಾಘವೇಂದ್ರ, ವಿಕ್ರಮ ಆಯಂಗಾರ್, ಸೇವಾದಳ ಕಾರ್ಯಧ್ಯಕ್ಷ ಮೋಹನ್ ಕುಮಾರ್, ಜೇಟ್ಟಿಹುಂಡಿ ಸುನಿಲ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, 23ನೇ ವಾರ್ಡ್ ರವಿ ಚಂದ್ರ, ಕಡಕೋಳ ಶಿವಲಿಂಗ, ದಿನೇಶ್ ಪಾಂಡುಪುರ, ರಾಜೇಶ್, ದೀಪಕ್, ಡಿಸಿಸಿ ಚಂದ್ರು, ರಾಜಶೇಖರ್, ಹರೀಶ್ ನಾಯ್ಡು, ತಂಚಿಕೊಪ್ಪಲಿನ ಯಜಮಾನರಾದ ಚಿಕ್ಕ ಚಿಕ್ಕಣ್ಣ, ನವ ಚೇತನ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಮರಿಗೌಡ, ಮಲ್ಲೇಶ್, ಮಾದೇಗೌಡ, ಜನತಾ ನಗರ ಕಾರ್ತಿಕ್, ಸುನಿಲ್ ಸಿಂಹ ಸೇರಿದಂತೆ ಹಲವರು ಮುಖಂಡರು ನಜರ್ಬಾದ್ ನಟರಾಜ್ ಅವರಿಗರ ಶುಭ ಕೋರಿ ಸನ್ಮಾನಿಸಿದರು.