ಮೈಸೂರು: ಮೈಸೂರಿನ ಯಾದವಗಿರಿ ಯಲ್ಲಿರುವ ಉತ್ತರಾದಿ ಮಠದ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಸಭಾಂಗಣದಲ್ಲಿ ಇಂದು ನವಗ್ರಹ ಹೋಮ
ಮತ್ತಿತರ ಧಾರ್ಮಿಕ ಕಾರ್ಯ ಗಳು ನೆರವೇರಿದವು.
ಇದೇ ವೇಳೆ ಪ್ರಾಣದೇವರಿಗೆ ೨೧ ಎಳ್ಳನೀರು ಅಭಿಷೇಕ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಕೃಷ್ಣರಾಜ ಕ್ಷೇತ್ರದ ವಿಪ್ರ ಮುಖಂಡರಾದ ಎನ್.ಎಂ.ನವೀನ್ ಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಎಸ್.ಬಿ.ವಾಸುದೇವ ಮೂರ್ತಿ, ಎನ್ ಎಂ ಪ್ರವೀಣ್ ಕುಮಾರ್,
ಆರ್.ಎಸ್ ಸತ್ಯನಾರಾಯಣ,ಭಾಗೇವಾಡಿ ಅಚಾರ್,ಪ್ರಮೋದಾಚಾರ ಮುಂತಾದವರು ಭಾಗವಹಿಸಿದ್ದರು.