ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನವದೆಹಲಿಯ ಕರ್ತವ್ಯ ಪಥದಲ್ಲಿ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ರಾಜ್ಯದ ಸ್ತಬ್ಧಚಿತ್ರವನ್ನು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವೀಕ್ಷಿಸಿ ಖುಷಿ ಪಟ್ಟರು.
ಲಕ್ಕುಂಡಿಯ ಶಿಲ್ಪ ಕಲೆಯ ತೊಟ್ಟಿಲು ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರದ ಅಂತಿಮ ಹಂತದ ಸಿದ್ಧತೆಗಳು ಪೊಲೀಸ್ ಬಿಗಿಭದ್ರತೆ ಇರುವ ರಕ್ಷಣಾ ಮಂತ್ರಾಲಯದ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ಭರದಿಂದ ಸಾಗುತ್ತಿದೆ.
ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಎಂ.ಇಮಕೊಂಗ್ಲ್ ಜಮೀರ್ ಅವರು ರಾಷ್ಟ್ರೀಯ ರಂಗಶಾಲಾ ಶಿಬಿರಕ್ಕೆ ಶುಕ್ರವಾರ ಭೇಟಿ ನೀಡಿ ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಆಯುಕ್ತರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಧಿಕಾರಿಗಳು ರಾಜ್ಯ ಸ್ತಬ್ಧಚಿತ್ರದ ಕುರಿತು ವಿವರ ನೀಡಿದರು.
ಈ ವೇಳೆ ನವದೆಹಲಿಯ ಕರ್ನಾಟಕ ಭವನದ ಸಹಾಯಕ ನಿವಾಸಿ ಆಯುಕ್ತರೂ ಆದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಸಿ.ಮೋಹನ ಕುಮಾರ್ , ವ್ಯವಸ್ಥಾಪಕರಾದ ಕೆ.ಆರ್.ವೆಂಕಟೇಶ, ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕಿ ಎಂ.ಶಾಲಿನಿ,ಪ್ರತಿರೂಪಿ ಸಂಸ್ಥೆಯ ರಾಜಕುಮಾರ್ ಉಪಸ್ಥಿತರಿದ್ದರು.