ಪರಿಸರ ಸ್ವಚ್ಛತೆಗೆ‌ ಆದ್ಯತೆ ನೀಡಿ- ಪ್ರಕಾಶ್ ಪ್ರಿಯದರ್ಶನ್

ಮೈಸೂರು: ನಮ್ಮ ಸುತ್ತಮುತ್ತಲಿನ ಪರಿಶುದ್ಧ ವಾತಾವರಣದಿಂದ ನಾವು ಹಾಕಿಕೊಂಡ ಯೋಜನೆಗಳು ಸಾಕಾರ ಗೊಳ್ಳಲು ಸಾಧ್ಯ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯ ದರ್ಶನ್ ಹೇಳಿದರು

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ
ಸಿಎಸ್ಐ. ಹಾರ್ಡ್ವಿಕ್ ಬಾಯ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿ ನಂತರ ಹಣ್ಣುಗಳು, ಲೇಖನಿ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

ಪರಿಸರ ಸ್ವಚ್ಛತೆಗೆ ನಮ್ಮ ಆದ್ಯತೆ ಅಗತ್ಯವಾಗಿದೆ, ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛತೆಯು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು.

ನಮ್ಮ ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಸಬಾರದು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡಬೇಕು ನಮ್ಮ ಮನೆಯಲ್ಲಷ್ಟೇ ಸ್ವಚ್ಛತೆ ಇದ್ದರೆ ಸಾಲದು ಸಾರ್ವಜನಿಕ ಸ್ಥಳದಲ್ಲೂ ಸ್ವಚ್ಛತೆ ಮತ್ತು ಪವಿತ್ರತೆ ಕಾಪಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಿ ಎಸ್ ಐ ಹಾರ್ಡ್ವಿಕ್ ಬಾಯ್ಸ್ ಬೋರ್ಡಿಂಗ್ ಹೋಮ್ ವಾರ್ಡನ್ ದೇವರತ್ನ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಶ್ರೀಧರ್, ಮಹೇಶ್, ಮಹದೇವ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್ ಮತ್ತಿತರರು ಹಾಜರಿದ್ದರು.