ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನ ಗೊಂಡಿದ್ದ ನಾಗಮಂಗಲ ಸಹಜ ಸ್ಥಿತಿಗೆ ಬಂದಿದೆ.
ಸಚಿವ ಚಲುವನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ ಭಾನುವಾರ ನಿಷೇಧಾಜ್ಞೆ ಕೂಡಾ ತೆರವುಗೊಳಿಸಲಾಗಿದೆ.
ಈ ಮಧ್ಯೆ ಕೋಮು ಗಲಭೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.
ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್ ಮಾಡಲಾಗಿತ್ತಿ ಎಂಬ ಶಂಕೆ ವ್ಯಕ್ತವಾಗಿದೆ.
ಎಫ್‌ಐಆರ್‌ನಲ್ಲಿರುವ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರು, ಪ್ರಕರಣದ 44ನೇ ಆರೋಪಿ ಯೂಸೂಫ್, 61ನೇ ಆರೋಪಿ ನಾಸೀರ್ ಇಬ್ಬರೂ ಕೇರಳ ರಾಜ್ಯದ ಮಲ್ಲಪುರಂ ನಿವಾಸಿಗಳು ಎಂದು ಗೊತ್ತಾಗಿದೆ.
ಈ ಇಬ್ಬರು ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದ್ದು,
ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ,ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್‌ಐಎ ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.