ನಾರಾಯಣಗೌಡರಿಗೆ ಆತಿಥ್ಯ ರತ್ನ ಪ್ರಶಸ್ತಿ

Spread the love

ಮೈಸೂರು: ಸನ್ಮಾನ, ಗೌರವಗಳು ಹೆಚ್ಚೆಚ್ಚು ಸೇವಾ ಕಾಯಕ ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದರು.

ಬೆಂಗಳೂರಿನ ಎಫ್ ಕೆ ಸಿ ಸಿ ಐ ಎನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘದ 70ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೋಟೆಲ್ ಉದ್ಯಮದ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜ್ಯಮಟ್ಟದ ಆತಿಥ್ಯ ರತ್ನ 2025 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಹೋಟೆಲ್ ಉದ್ಯಮ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಆತಿಥ್ಯ ರತ್ನ 2025 ಸೇವಾ ಪ್ರಶಸ್ತಿಯನ್ನು ನೀಡಿದ್ದಾರೆ,ಇದು ಸಂತಸದ ವಿಷಯವೇ ಆಗಿದೆ,ಆದರೆ ಸತತ ಎರಡು ವರ್ಷಗಳ ಕಾಲ ಇತರೇ ಸನ್ಮಾನ, ಪ್ರಶಸ್ತಿಗಳಂತಹ ಗೀಳಿನಿಂದ ನಾನು ದೂರವೇ ಇದ್ದೆ ಎಂದು ಹೇಳಿದರು.

ನಾವು ಮಾಡುವ ಕಾಯಕದಲ್ಲಿ ಆತ್ಮತೃಪ್ತಿ ಕಂಡುಕೊಂಡರೆ ಸಾಕು, ಅದಕ್ಕಿಂತ ಇನ್ನೊಂದು ಖುಷಿ ಬೇರೆ ಇಲ್ಲ ಎಂಬುದು ನನ್ನ ಅಭಿಮತ ಎಂದು ತಿಳಿಸಿದರು.

ಇಂತಹ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ನಾರಾಯಣ ಗೌಡ ತಿಳಿಸಿದರು.

ನಾನು ಪಡೆದ ಪ್ರಶಸ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಈ ಪ್ರಶಸ್ತಿಯನ್ನು
ನನ್ನ ಎಲ್ಲಾ ಹೋಟೆಲ್ ಉದ್ಯಮಿಗಳಿಗೆ, ಅರ್ಪಿಸುತ್ತೇನೆ ಎಂದು ನುಡಿದರು.

ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ದೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವ ಎದೆಗಾರಿಕೆ ಯೊಂದಿಗೆ ಮುನ್ನಡೆದಾಗ ಮಾತ್ರ ನಮ್ಮ ಗುರಿ ಮುಟ್ಟಿ ನಾವು ಬಯಸಿದ್ದನ್ನು ಪಡೆಯಬಹುದು. ಪ್ರೀತಿ ವಿಶ್ವಾಸದಿಂದ ಇಟ್ಟ ಹೆಜ್ಜೆ ಬದುಕಿನ ದಿಕ್ಕನ್ನೇ ಬದಲಾಯಿಸಲು ಸಾಧ್ಯ ಎಂದು ನಾರಾಯಣ ಗೌಡ ತಿಳಿಸಿದರು.

ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ,
ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಪ್ರೈಮ್ ಗೌಡ ರವರ ಸಾಧನೆಯ ಮೊದಲ ಮೆಟ್ಟಿಲು ಎಂದು ಹೇಳಿದರು,

ಓರ್ವ ಸಾಧಕನ ಹಿಂದೆ ಕಠಿಣ ಪರಿಶ್ರಮವಿರುತ್ತದೆ, ಶ್ರಮ ಸಂಸ್ಕೃತಿಯ ಜೊತೆಗೆ ಇತರರನ್ನು ಗೌರವಿಸುವ ಉದಾರ ಗುಣ ಸಂಪನ್ನ ನಾರಾಯಣಗೌಡ ಅವರದು. ಈ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಅವರಿಗೆ ಆತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಇಡೀ ನಮ್ಮ ಹೋಟೆಲ್ ಉದ್ಯಮಿಗಳಿಗೆ ಹೆಮ್ಮೆ ತಂದಿದೆ. ಮೈಸೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಹಲವು ಕುಟುಂಬದ ಜನರಿಗೆ ಉದ್ಯೋಗ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆದಿ
ಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್
, ಶಾಸಕರಾದ ಅಶ್ವಥ್ ನಾರಾಯಣ್, ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘದ ಅಧ್ಯಕ್ಷರಾದ ಜಿ ಕೆ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.