ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ 1995ರಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೀ ರಾಘವೇಂದ್ರ ಅವರು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ
ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಲು ರಾಘವೇಂದ್ರ ಅವರು ನೆರವಾಗಿದ್ದಾರೆ.
ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದಲ್ಲಿ ಪುನಿತಾ, ವಾಣಿಜ್ಯ ವಿಭಾಗದಲ್ಲಿ ಅರ್ಪಿತ, ಕಲಾವಿಭಾಗದಲ್ಲಿ ಮಧು ಮತ್ತು ಮರಿಯಾ ವಿದ್ಯಾರ್ಥಿಗಳಿಗೆ ಧನಸಾಯವನ್ನು ಮಾಡಿದರು.
ನಂಯ ಮಾತನಾಡಿದ ರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿದರೆ ಅವರು ಈ ಹಣದಿಂದ ಕಾಲೇಜಿನ ಶುಲ್ಕ ಅಥವಾ ಅಧ್ಯಯನ ಮಾಡಲು ಪುಸ್ತಕಗಳನ್ನು ಕೊಂಡುಕೊಂಡರೆ ಅವರು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ ,ಡಾ.ಟಿ.ಕೆ ರವಿ, ಡಾ. ಕೆ ಮಾಲತಿ, ಡಾ. ಎ ಸುಮಾ ,ರೂಪ, ಮೀನಾ,ವತ್ಸಲ, ಅಂಬಿಕಾ ,ಪದ್ಮಾವತಿ ಸುಮಿತ್ರ, ನಾಗರಾಜ್, ದಿನೇಶ್,ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.