ಕೆರೆಕಟ್ಟೆಗಳ ಒತ್ತುವರಿ ತೆರವು ಕಾರ್ಯ ಚುರುಕು: ಮೂರು ಕಟ್ಟೆಗಳು ಒತ್ತುವರಿ ಮುಕ್ತ

ನಂಜನಗೂಡು: ಕೆರೆಕಟ್ಟೆ ಒತ್ತುವರಿ ಮಾಡಿಕೊಂಡಿರುವ ಭೂ ಕಬಳಿಕೆದಾರರಿಗೆ ನಂಜನಗೂಡು ತಾಲೂಕು ಆಡಳಿತ ಚುರುಕು ಮುಟ್ಟಿಸಿದೆ.

ಕೆರೆಕಟ್ಟೆಗಳ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿರುವ ತಾಲೂಕು ಆಡಳಿತ ಮೂರು ಕಟ್ಟೆಗಳನ್ನ ಮುಕ್ತಗೊಳಿಸಿತು.

ಸಾಕಷ್ಟು ವರ್ಷಗಳಿಂದ ಕೆರೆ ಕಟ್ಟೆಗಳನ್ನು ಕಬಳಿಸಿಕೊಂಡು ಜನ ಜಾನುವಾರುಗಳ ಕುಡಿಯುವ ನೀರು ಮತ್ತು ತಿನ್ನುವ ಆಹಾರದ ಸಮಸ್ಯೆಗೆ ಕಾರಣರಾಗಿದ್ದ ಒತ್ತುವರಿದಾರರಿಗೆ ನಂಜನಗೂಡು ತಾಲೂಕು ಆಡಳಿತ ಬಿಸಿ ಮುಟ್ಟಿಸಿದೆ‌

ತಾಲೂಕು ದಲಿತ ಸಂಘರ್ಷ ಸಮಿತಿ ಸಂಘಟಕರ ದೂರಿನ ಆಧಾರದ ಮೇರೆಗೆ ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸ್ನೋರು ಅವರು ಸುಪ್ರೀಂ ಕೋರ್ಟ್ ಖಡಕ್ ಆದೇಶದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕಾರ್ಯಾಚರಣೆ ಮಾಡಿದರು.

ಒತ್ತುವರಿಯಾಗಿರುವ ಬರೋಬರಿ 344 ಕೆರೆಗಳ ಸಂರಕ್ಷಣೆಗೆ ಸರ್ವೆ ಇಲಾಖೆಯ ಜೊತೆಗೂಡಿ ಕೆರೆಕಟ್ಟೆಗಳ ಸಮೀಕ್ಷೆ ನಡೆಸಿ ಅತಿಕ್ರಮಿಸಿಕಂಡ ಒತ್ತುವರಿದಾರರಿಗೆ ಕಠಿಣ ಎಚ್ವರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಂಜನಗೂಡು ತಾಲೂಕಿನ ಮಾಕನಪುರ ಗ್ರಾಮದಿಂದ ಕೆರೆ ಒತ್ತುವರಿ ತೆರವು ಕಾರ್ಯಚರಣೆ ಪ್ರಾರಂಭವಾಗಿದೆ.

ಮಾಕನಪುರ ಗ್ರಾಮದ ಸರ್ವೆ ನಂಬರ್ 2 ರ ಇಳೀತಾಳ್ ಕಟ್ಟೆ ಮತ್ತು ರಂಗನ ಕಟ್ಟೆ ಸರ್ವೆ ನಂಬರ್ 35ರ ಹಿದಿಯಮ್ಮನ ಕಟ್ಟೆ ಹಾಗೂ ಸರ್ವೆ ನಂಬರ್ 62 ರಲ್ಲಿ ಹೊಸ ಕಟ್ಟೆ ಕೆರೆಗಳ ಒತ್ತುವರಿಯನ್ನ ತೆರುವು ಮಾಡಲಾಯಿತು.

ನಂಜನಗೂಡಿನ ತಾಲೂಕು ಭೂಮಾಪನ ಇಲಾಖೆಯ ಸರ್ಕಾರಿ ಸರ್ವೆಯರ್ ಮಂಟೇ ಲಿಂಗಯ್ಯ ಮತ್ತು ಕೆಂಪಣ್ಣ ರವರ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆದಿದೆ.

ಒತ್ತುವರಿ ತೆರುವು ಕಾರ್ಯಾಚರಣೆಗೆ ಕಸಬಾ ರೆವೆನ್ಯೂ ಅಧಿಕಾರಿ ಹರೀಶ್ ಸರ್ವೇಯರ್ ಮಂಟೆ ಲಿಂಗಯ್ಯ ಕೆಂಪಣ್ಣ ದಸಂಸ ಜಿಲ್ಲಾ ಸಂಚಾಲಕ ಮಂಜು ಶಂಕರಪುರ, ಕೃಷ್ಣಮೂರ್ತಿ, ಹೊಳೆಯಪ್ಪ, ಮಾಕನಪುರ ಗ್ರಾಮದ ದಸಂಸ ಮುಖಂಡರು ಗ್ರಾಮಸ್ಥರು ಸಾಥ್ ನೀಡಿದ್ದಾರೆ.