ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಎಲ್ಲರಿಗೂ ಮಾದರಿ- ಎಸ್.ಲಿಂಗಣ್ಣ ಸ್ವಾಮಿ

Spread the love

ನಂಜನಗೂಡು: ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ವೈಕರಿ ಪ್ರತಿಯೊಬ್ಬ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್‌ ಲಿಂಗಣ್ಣ ಸ್ವಾಮಿ ತಿಳಿಸಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಆ ದಿನಗಳಲ್ಲಿ ಮೈಸೂರು ಸಂಸ್ಥಾನದಲ್ಲಿ ಹಾಕಿಕೊಂಡ ಯೋಜನೆಗಳು ಪ್ರಸ್ತುತ ಸಮಯದಲ್ಲೂ ಚಾಲ್ತಿಯಲ್ಲಿದೆ, ಇದು ಅವರ ದೂರ ದೃಷ್ಟಿ ಎಂದು ಎಸ್‌ ಲಿಂಗಣ್ಣ ಸ್ವಾಮಿ ತಿಳಿಸಿದರು.

ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಎನ್. ದಿನೇಶ್ ಅವರು ಕೃಷ್ಣರಾಜ ಒಡೆಯರ್ ಅವರ ಜೀವನ ಚಿತ್ರಣ, ಅವರ ಸಾಧನೆಗಳು ,ಅವರು ಕೈಗೊಂಡ ಯೋಜನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೆಚ್.ಕೆ. ಪ್ರಕಾಶ್, ಎನ್ ನಾಗರಾಜು,ಡಾ. ಟಿ.ಕೆ ರವಿ, ಡಾ. ಸುಮಾ ,ರೂಪ ಸ್ವಾಮಿಗೌಡ ಮತ್ತಿತರರು ಹಾಜರಿದ್ದರು.