ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಕಿದೆ ಕ್ಯಾಂಟೀನ್ ವ್ಯವಸ್ಥೆ

Spread the love

ನಂಜನಗೂಡು: ಅತ್ಯಂತ ಜರೂರಾಗಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವ ಅತ್ಯಗತ್ಯವಿದೆ.

ಕ್ಯಾಂಟೀನ್ ವ್ಯವಸ್ಥೆ ಇಲ್ಲದ ಕಾರಣ ವಿಧಿ ಇಲ್ಲದೆ ಸೈಕಲ್ ಪಾರ್ಕಿಂಗ್ ಲಾಟ್‌ ಅಥವಾ ಮರದ ಕೆಳಗೆ ವಿದ್ಯಾರ್ಥಿಗಳು ಕುಳಿತು ಊಟ ಮಾಡುತ್ತಾರೆ.ಸೂಕ್ತ ವ್ಯವಸ್ಥೆ ಇಲ್ಲದೆ ವಿಧ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ.

ಸುಮಾರು 700 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿರುವ ಈ ಕಾಲೇಜಿಗೆ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ.

ಕ್ಯಾಂಟೀನ್ ಗಾಗಿ ಕಟ್ಟಡ ಮೀಸಲಿದ್ದರೂ ನಡೆಸಲು ಯಾರೂ ಮುಂದೆ ಬಂದಿಲ್ಲ.ಕ್ಯಾಂಟೀನ್ ವ್ಯವಸ್ಥೆ ಇಲ್ಲದೆ ಮರಗಳ ನೆರಳೆ ಇವರಿಗೆ ಆಶ್ರಯವಾಗಿದೆ.

ತಕ್ಷಣ ಕಾಲೇಜು ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಏರ್ಪಡಿಸಿ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಕೋರಿ
ದ್ದಾರೆ.

ವಿಧ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಶಾಸಕ ದರ್ಶನ್ ಧೃವನಾರಾಯಣ್ ಶೀಘ್ರದಲ್ಲೇ ಕ್ಯಾಂಟೀನ್ ತೆರೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಶಾಸಕರ ಭರವಸೆ ಯಾವಾಗ ಈಡೇರುವುದೊ ಕಾದುನೋಡಬೇಕಿದೆ.