ನಂಜನಗೂಡು: ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಆದರೆ ಕೃಷಿಯತ್ತ ಒಲವು ಬೆಳೆಸಿಕೊಂಡು ಯಶಸ್ವಿಯತ್ತ ಸಾಗಿರುವ ಗಿರೀಶ್ ಅವರ ಯಶೋಗಾತೆ ಇದು.

ನಂಜನಗೂಡು ತಾಲೂಕು ಅಂಬಳೆಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್ ಅವರಿಗೆ
ಇತ್ತೀಚೆಗೆ ಕೃಷಿ ಕಡೆ ಒಲವು ಬಂದು ಹಗಿನವಾಳಿನಲ್ಲಿ ನರ್ಸರಿ ಪ್ರಾರಂಭಿಸಿದ್ದಾರೆ.

ಈ ನರ್ಸರಿ ಯಲ್ಲಿ ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ತರಕಾರಿ ಸಸಿಗಳನ್ನು ಬೆಳೆದು ರೈತರಿಗೆ ನೀಡುವ ಉದ್ದೇಶ ಹೊಂದಿದ್ದಾರೆ.
ಇದೀಗ ಅವರು ಬಸವೇಶ್ವರ ನರ್ಸರಿ ಯನ್ನು ಮೂಢನಂಬಿಕೆಯನ್ನು ತೊರೆದು ಹುಣ್ಣಿಮೆಯಂದೆ ಪ್ರಾರಂಭಿಸಿದದು ವಿಶೇಷ.

ಈ ವೇಳೆ ಅಲ್ಲಿ ಸೇರಿದ್ದ ರೈತರು ಬಸವೇಶ್ವರ ನರ್ಸರಿ ಯನ್ನು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಮಾಡುವ ಮೂಲಕ ಅಂಬಳೆ ಗಿರೀಶ್ ಅವರನ್ನು ಅಭಿನಂದಿಸಿದರು.

ಬಸವಾದಿ ಶರಣರ ವಚನ ಪುಸ್ತಕವನ್ನು ನೀಡಿ ಶರಣರ ಕಾಯಕ ನಿಷ್ಠೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಬದುಕಬೇಕು,ವಚನಗಳನ್ನು ಪ್ರತಿದಿನವು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನಂಜನಗೂಡು ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಚೆನ್ನಪ್ಪ, ಬಸವಸೇನೆ ಅದ್ಯಕ್ಷ ಯೋಗಿಶ್ ಮಹೇಶ್, ಮುದ್ದಹಳ್ಳಿ ಅಶೋಕ್ ಮತ್ತು ಅಕ್ಕಪಕ್ಕದ ಹಳ್ಳಿಯ ರೈತರು ಭಾಗವಹಿಸಿದ್ದರು.