ಬೆಂಗಳೂರು: ಜಿಎಸ್‌ಟಿ ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ಸೆ.22 ರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.
ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು ಶೇ 12 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5 ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ.ಆದ್ದರಿಂದ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.
ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನ ದರವೇ ಮುಂದುವರಿಯಲಿದೆ.
ಶೀಘ್ರದಲ್ಲೇ ಈ ಕುರಿತು ಕೆಎಂಎಫ್ ಪ್ರಕಟಣೆ ಹೊರಡಿಸಲಿದೆ.