ಮೈಸೂರು: ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿಗುಂದ ಗ್ರಾಮದ ಶ್ರೀ ರಾಮ ಯುವಕರ ಬಳಗದ ವತಿಯಿಂದ ಶ್ರೀ ರಾಮ ಮಂದಿರ ಜೀರ್ಣೋದ್ದಾರ ಮಾಡಿ ಮಾದರಿಯಾಗಿದ್ದಾರೆ.
ಈಗ ರಾಮಮಂದಿರ ಉದ್ಘಾಟನೆಗೆ ಸಿದ್ದವಾಗಿದೆ.ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಅವರಿಗೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ, ಆಹ್ವಾನಿಸಲಾಯಿತು.
ಈ ವೇಳೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗ, ಶ್ರೀ ರಾಮ ಬಳಗದ ಅಧ್ಯಕರಾದ ಗಂಗಾಧರ್, ಕಾರ್ಯದರ್ಶಿ ನಾಗೇಶ್ ಹಾಗೂ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.