ಮೈಸೂರು: ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಳು ಬೀಳುತ್ತಿದ್ದ ಶಾರದಾ ದೇವಿನಗರದ ಮುಡಾ ಮಾರುಕಟ್ಟೆ ಶುಚಿಗೊಳಿಸಿ ನಮೋ ಸಂತೆ ಆರಂಭ ಮಾಡಿ
ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಮಾದರಿಯಾಗಿದ್ದಾರೆ.
ಶಾರದಾ ದೇವಿನಗರದ ನೂತನ ಪಾಲಿಕೆ ವಲಯ ಕಚೇರಿಯ ಎದುರು ಇರುವ ಮೂಡಾ ಮಾರುಕಟ್ಟೆ ಅನೇಕ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸಾರ್ವಜನಿಕರ ಬಳಕೆಯಿಲ್ಲದೇ ಅನೈರ್ಮಲ್ಯದ ತಾಣವಾಗಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ ನಮೋ ಸಂತೆ ಹೆಸರಿನಲ್ಲಿ ಸ್ವದೇಶಿ ವಸ್ತುಗಳು, ಸಾವಯವ, ಗವ್ಯ ಉತ್ಪನ್ನಗಳು ಸೇರಿದಂತೆ ಬೀದಿಬದಿ ವರ್ತಕರನ್ನು ಸಹ ಕರೆಸಿ ವ್ಯಾಪಾರ ಪ್ರಾರಂಭಿಸುವಂತೆ ಪ್ರೇರಣೆ ನೀಡಿದರು.
ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಮೋ ಸಂತೆಯನ್ನು ಉದ್ಘಾಟಿಸಿ ಸ್ವದೇಶಿ ಉತ್ಪನ್ನಗಳ ಬಳಕೆ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ ರಘು, ನಮೋ ಸಂತೆಯ ಸಂಚಾಲಕರಾದ ಎಸ್. ತ್ಯಾಗರಾಜ್, ಸಹ-ಸಂಚಾಲಕ ಶಿವು ಪಟೇಲ್, ಮಂಡಲದ ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಮುಖಂಡರಾದ ಬಿ.ಸಿ ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಹೆಚ್.ಜಿ. ರಾಜಮಣಿ, ಚಂದ್ರಶೇಖರಸ್ವಾಮಿ, ಎಸ್.ಮಹೇಶ್ ಕುಮಾರ್, ರಂಗೇಶ್, ಸೋಮಣ್ಣ, ರಾಘವೇಂದ್ರ, ದೇವರಾಜ್, ಪುಟ್ಟಮ್ಮಣ್ಣಿ, ಮಂಜುಳಾ, ರವಿ ನಾಯಕಂಡ, ಬಸವಣ್ಣ, ರಾಜ ನಾಯಕ್, ನಾಗರಾಜ್ ಜನ್ನು, ನಾಗೇಶ್, ಕಾಂತರಾಜ ಅರಸು, ಲಕ್ಷ್ಮಿ ಜಯಶಂಕರ್, ಗೋಪಾಲ್, ಚಂದನ್ ಗೌಡ, ಸಾಗರ್ ಸಿಂಗ್, ಮಧು, ರಾಮಕೃಷ್ಣಪ್ಪ, ಬಸವಣ್ಣ, ಚೇತನಾ ಭೂಷಣ್, ಕಲಾವತಿ, ತುಳಸಿ, ಪ್ರವೀಣೆ ಜೋನ್ಸ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.