ಮೈಸೂರು: ಕರ್ನಾಟಕ ಸರ್ಕಾರದ ಮಹಿಳಾ ಆಯೋಗದ ರಾಜ್ಯಾಧ್ಯಕ್ಷರಾದ
ನಾಗಲಕ್ಷ್ಮಿ ಚೌದರಿ ಅವರು ಮೈಸೂರಿನ ಅಗ್ರಹಾರದ ನಿವಾಸಿ ಹೇಮಲತಾ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿನ ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟರು.
ಈ ವೇಳೆ ನಾಗಲಕ್ಷ್ಮಿ ಚೌದರಿ ಅವರು ಮಾತನಾಡಿ ನನ್ನನ್ನು ಉದ್ದೇಶಪೂರ್ವಕವಾಗಿ ಒತ್ತಾಯದಿಂದ ರೇಖಾ ಅವರು ಇಲ್ಲಿಗೆ ಕರೆತಂದಿದ್ದಾರೆ ಈ ಗೊಂಬೆ ಜೋಡಣೆ ಕಂಡುತುಂಬಾ ಸಂತಸವಾಯಿತು, ಗೊಂಬೆಗಳು ಬಹಳ ಚೆನ್ನಾಗಿದೆ,ನನ್ನನ್ನು ಕರೆ ತಂದಿದ್ದಕ್ಕೆ ಅವರಿಗೂ ಧನ್ಯವಾದ ಎಂದು ಹೇಳಿದರು.
ಗೊಂಬೆ ಜೋಡಣೆ ಮಾಡಿರುವ ಹೇಮಲತಾ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಗೊಂಬೆ ಜೋಡಣೆ ನಾನು ಇದುವರೆಗೂ ನೋಡಿಯೇ ಇರಲಿಲ್ಲ ಇದು ವಿಚಿತ್ರ,ಅಷ್ಟೇ ಅದ್ಭುತವಾಗಿದೆ. ಇದೇ ಮೊದಲ ಬಾರಿ ನೋಡಿದ್ದೇನೆ ಬಹಳ ಸಂತೋಷವಾಯಿತು ಎಂದು ಖುಷಿ ಪಟ್ಟರು.
ಹೇಮಲತಾ ಅವರು ಕಳೆದ 35 ವರ್ಷಗಳಿಂದ ಗೊಂಬೆ ಜೋಡಣೆ ಮಾಡುತ್ತಿದ್ದಾರೆ ಅವರು ಮತ್ತು ಅವರ ಪತಿ ನಿವೃತ್ತ ಸರ್ಕಾರಿ ನೌಕರರು
ಹಾಗೂ ಅವರ ಕುಟುಂಬದ ಕೆಲಸ ಸ್ವಾಗತಾರ್ಹವಾಗಿದೆ ಎಂದು ಹೇಳಿದರು
ಕಳೆದ 35 ವರ್ಷಗಳಿಂದ ಹೇಮಲತಾ ಅವರು 3000ಕ್ಕೂ ಹೆಚ್ಚು ಹೆಚ್ಚುಗಂಬೆ ಜೋಡಣೆ ಮಾಡುತ್ತಿದ್ದಾರೆ ನಮ್ಮ ಪೂರ್ಣ ಸಂಸ್ಕೃತಿಯನ್ನ ಸಾವಿರಾರು ಗೊಂಬೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ನಾಗಲಕ್ಷ್ಮಿ ಚೌದರಿ ಹೃದಯತುಂಬಿ ನುಡಿದರು.
ಇತಿಹಾಸ,ರಾಮಾಯಣ ಎಲ್ಲವನ್ನೂ ಗೊಂಬೆ ಜೋಡಣೆ ಮೂಲಕ ತೋರಿಸಿದ್ದಾರೆ ನನಗೆ ಬಹಳ ಖುಷಿಯಾಯಿತು ಮೈಸೂರಿಗೆ ಯಾರೇ ಬಂದರೂ ಇಲ್ಲಿಗೆ ಬಂದು ಈ ಗೊಂಬೆ ಜೋಡಣೆಯನ್ನು ನೋಡಬೇಕೆಂದು ನಾಗಲಕ್ಷ್ಮಿ ಚೌದುರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ರಮೇಶ್ ರಾಮಪ್ಪ,ಕಾವ್ಯ,ಪ್ರೇಮ, ಲೀಲಾ, ವಾಣಿ ಸುಬ್ಬಯ್ಯ, ಸುಬ್ಬಲಕ್ಷ್ಮಿ, ನಾರಾಯಣ್,
ಮತ್ತಿತರರು ಹಾಜರಿದ್ದರು.