ನಾಗಲಿಂಗ ಸ್ವಾಮಿಯವರನ್ನು ಸ್ಮರಿಸಿದ ಹೆಚ್.ವಿ.ರಾಜೀವ್

ಮೈಸೂರು: ನಾಗಲಿಂಗ ಸ್ವಾಮಿ ಅವರು ಹೋರಾಟಗಾರರು ಹಾಗೂ ಸಾಹಿತಿಗಳು ಅಂಥವರು ಈಗ ಇದ್ದಿದ್ದರೆ ಕನ್ನಡ ಪರ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು ಎಂದು ಮೂಡ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕನ್ನಡ ಕ್ರಾಂತಿದಳ ಸಂಘಟನೆಯ ಸಂಸ್ಥಾಪಕ ಕನ್ನಡ ಯೋಧ ನ. ನಾಗಲಿಂಗ ಸ್ವಾಮಿ ಅವರ ಜನ್ಮದಿನಾಚರಣೆಯನ್ನು ಮೈಸೂರಿನ ಪದ್ಮ ಚಿತ್ರ ಮಂದಿರ ಬಳಿ ಅರ್ಥಪೂರ್ಣವಾಗಿ ಆಚರಿಸಿದ ವೇಳೆ ರಾಜೀವ್ ಮಾತನಾಡಿದರು.

ಇಂತಹ ಮಹಾನಿಯರ ಜನ್ಮದಿನವನ್ನು ಆಚರಿಸಲು ನಮಗೆ ತುಂಬಾ ಸಂತೋಷವಾಗುತ್ತದೆ ಎಂದು ನುಡಿದರು.

ಸುಣ್ಣದ ಕೆರೆ ರಮೇಶ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂದೆ ತಾಯಂದಿರನ್ನು ಮನೆಯಲ್ಲಿ ನೋಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿದೆ ಎಂದು ಆಶ್ರಮಗಳಿಗೆ ಸೇರಿಸುತ್ತಿದ್ದಾರೆ ಇಂತಹ ದಿನಗಳಲ್ಲಿ ನಾಗಲಿಂಗ ಸ್ವಾಮಿಯಂತಹ ಹೋರಾಟಗಾರರ ಮಗ ತೇಜಸ್ವಿ ಅವರು ಅವರ ತಂದೆಯ ನೆನಪಿಗಾಗಿ ಹುಟ್ಟು ಹಬ್ಬ ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ವೇಳೆ ನ ನಾಗಲಿಂಗ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್, ಸಮಾಜ ‌ಸೇವಕರಾದ ಅಟೋ ಮಹೇಶ್, ತೇಜಸ್ವಿ ನಾಗಲಿಂಗಸ್ವಾಮಿ, ಕೆ, ಆರ್, ಬ್ಯಾಂಕ್ ಅಧ್ಯಕ್ಷ ಬಸಪ್ಪ, ಸಮಾಜ ‌ಸೇವಕರಾದ ಸುಣ್ಣದ ಕೇರಿ ರಮೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪಾರ್ಥಸಾರಥಿ, ಮೂಗೂರು ನಂಜುಂಡ ಸ್ವಾಮಿ, ತೇಜಸ್ವಿನಿ ನಾಗಲಿಂಗ ಸ್ವಾಮಿ, ಮುಖಂಡರಾದ ಭಾಸ್ಕರ್, ವೀರಶೈವ ಮೂರ್ತಿ, ಪಡುವಾರಳ್ಳಿ ಪಾಪಣ್ಣ, ಕನ್ನಡ ಕ್ರಾಂತಿದಳ ಮೈಸೂರು ಜಿಲ್ಲಾಧ್ಯಕ್ಷ ಲೋಹಿತ್ ಅರಸ್, ಹೋರಾಟಗಾರ್ತಿ ಕಲಾಧನು, ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.