ನ. ನಾಗಲಿಂಗ ಸ್ವಾಮಿ ಅವರ ಸ್ಮರಣೆ ಮಾಡಿದ ಕರ್ನಾಟಕ ಯುವಘರ್ಜನೆ ವೇದಿಕೆ

Spread the love

ಮೈಸೂರು: ರಾಜ್ಯ ಪ್ರಶಸ್ತಿ ಪುರಸ್ಕೃತರು, ಕನ್ನಡ ಕ್ರಾಂತಿದಳದ ಸಂಸ್ಥಾಪಕರಾದ ಕನ್ನಡ ಯೋಧ ದಿ ನ.ನಾಗಲಿಂಗಸ್ವಾಮಿಯವರ‌ ಜಯಂತಿಯನ್ನು ಕರ್ನಾಟಕ ಯುವ ಘರ್ಜನೆ ವೇದಿಕೆ ವಿಶೇಷವಾಗಿ ಆಚರಿಸಿತು.

ಮೈಸೂರಿನ ನಜರಬಾದ್ ನಲ್ಲಿರುವ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ದಿ. ನ.ನಾಗಲಿಂಗಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿ ಜಯಂತಿಯನ್ನು ಆಚರಣೆ‌ ಮಾಡಲಾಯಿತು.

ಕರ್ನಾಟಕ ಯುವ ಘರ್ಜನೆ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್ ಅವರು ಮಾತನಾಡಿ, ನ. ನಾಗಲಿಂಗ ಸ್ವಾಮಿಯವರು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಚಾರದಲ್ಲಿ ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾದದ್ದು ಎಂದು ಬಣ್ಣಿಸಿದರು.

ನಾವೆಲ್ಲ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ.ನಾಗಲಿಂಗಸ್ವಾಮಿ ಅವರ ಪುತ್ರ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ‌ಅವರಿಗೆ ಉಮೇಶ್ ಅವರು ಸನ್ಮಾನಿಸಿದರು ಗೌರವಿಸಿದರು.

ಈ ವೇಳೆ ಮಾತನಾಡಿದ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಮ್ಮ ತಂದೆ ನಾಗಲಿಂಗ ಸ್ವಾಮಿ ಅವರನ್ನು ಸ್ಮರಿಸಿ ಕರ್ನಾಟಕ ಯುವ ಘರ್ಜನೆ ವೇದಿಕೆಯವರು ಜನ್ಮದಿನ ಆಚರಿಸಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ನಾ ನಾಗಲಿಂಗ ಸ್ವಾಮಿಯವರು ನಾಡಿನ ನೆಲ ಜಲ ಭಾಷೆ ಇತಿಹಾಸ ಸಂಸ್ಕೃತಿ ಸಾಹಿತ್ಯಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ ಇದು ನನಗೆ ಹೆಮ್ಮೆಯ ವಿಷಯ. ನಾವೆಲ್ಲ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತೇವೆ ಎಂದು ತಿಳಿಸಿದರು.

ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷರಾದ ವೈ.ಎನ್‌.ಮಹೇಶ್, ಕಿರಣ್ ಸೋಮಣ್ಣ, ರಾಘವೇಂದ್ರ, ಅರುಣ್, ಕಾಳೆಗೌಡ, ಮೋಹನ್ ಉಪಸ್ಥಿತರಿದ್ದರು.