ಮೈಸೂರು,ನವೆಂಬರ್.೧: ಮೈಸೂರಿನ ಬ್ರಾಹ್ಮಣ ಧರ್ಮ ಸಭಾದ ನೂತನವಾಗಿ ಚುನಾಯಿತರಾದ ಪದಾಧಿಕಾರಿಗಳನ್ನು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಮಿತ್ರ ಬಳಗದ ವತಿಯಿಂದ
ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಚಾಮುಂಡಿಪುರಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬ್ರಾಹ್ಮಣ ಧರ್ಮ ಸಹಾಯ ಸಭಾದ ನೂತನ ಅಧ್ಯಕ್ಷರಾದ ಎಂ ಶ್ರೀನಿವಾಸ ಅವರು,ಧನ್ಯವಾದ ಸಲ್ಲಿಸಿ ಮಾತನಾಡಿದರು.
ಎನ್.ಎಂ.ನವೀನ್ ಕುಮಾರ್ ಅವರ ತಂದೆ,ಕೆ.ಆರ್.ಮೋಹನ್ ಕುಮಾರ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ,ಬ್ರಾಹ್ಮಣ ಧರ್ಮ ಸಹಾಯಸಭಾ ಗೆ ನಾಗರಿಕ ಸೌಕರ್ಯ ನಿವೇಶನ (ಸಿಎ ಸೈಟ್) ನೀಡಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವೀನ್ ಕುಮಾರ್ ಅವರು ನೂತನವಾಗಿ ಚುನಾಯಿತರಾದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ತಿಳಿಸಿದರು.
ವಿಪ್ರ ಸಮಾಜದ ಒಗಟ್ಟಿಗಾಗಿ ಮತ್ತು ಒಳಿತಿಗಾಗಿ ಶರ್ಮಿಸುವಂತೆ ಪದಾಧಿಕಾರಿಗಳಲ್ಲಿ ಕೋರಿದರು.
ಕಾರ್ಯಕ್ರಮದಲ್ಲಿ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್.ಸತ್ಯನಾರಾಯಣ,ವಿಪ್ರ ಮುಖಂಡರಾದ ಗಜಾನನ ಹೆಗ್ಡೆ ಸೇರಿದಂತೆ ನೂರಾರು ಮಂದಿ ವಿಪ್ರ ಸಮಾಜದವರು ಹಾಜರಿದ್ದರು.

