ಪುಂಡುರ ಹಾವಳಿ,ಗಾಂಜಾ‌ ತಡೆ: ಗರುಡ‌ ಗಸ್ತಿಗೆ ಶ್ರೀವತ್ಸ ಸೂಚನೆ

Spread the love

ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಹಾಗೂ ಲಕ್ಷ್ಮಿಪುರಂ ಬಡಾವಣೆ ವ್ಯಾಪ್ತಿಯಲ್ಲಿ ತತ್‌ಕ್ಷಣವೇ ‌ಗರುಡ‌ ಗಸ್ತಿನ ಮೂಲಕ ಗಾಂಜಾ ಮತ್ತಿತರ ಚಟುವಟಿಕೆಗಳನ್ನು ಮಟ್ಟ ಹಾಕಬೇಕೆಂದು ‌ಶಾಸಕ ಟಿ.ಎಸ್.ಶ್ರೀವತ್ಸ ಸೂಚಿಸಿದ್ದಾರೆ.

ಮಂಗಳಬಾರ ಬೆಳಿಗ್ಗೆ ವಾರ್ಡ್ ನಂಬರ್ ೫೬ರ ಕೃಷ್ಣಮೂರ್ತಿಪುರಂ ಹಾಗೂ ಲಕ್ಷ್ಮಿಪುರಂ ವ್ಯಾಪ್ತಿಯ ಗೋಪಾಲಸ್ವಾಮಿ ಕಾಲೇಜು ಭಾಗದಿಂದ ಪಾದಯಾತ್ರೆ ಮಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ನಂತರ ಶಾಸಕರು ಮಾತಮಾಡಿದರು.

ಎರಡು ಮೂರು ತಿಂಗಳ ಹಿಂದೆಯೇ ಈ‌ ಭಾಗದ ಹಲವಾರು ಮಂದಿ ಈ ಭಾಗದಲ್ಲಿ ಮದ್ಯವ್ಯಸನಿಗಳು, ಗಾಂಜಾ ಸೇವನೆ ಮಾಡುವವರು ಹೆಚ್ಚಾಗಿದ್ದಾರೆ,ಕಾಲೇಜು ಹುಡುಗ ಹುಡುಗಿಯರು ಬಂದು ಮಾತನಾಡುತ್ತಿರುತ್ತಾರೆ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದರು ಹಾಗಾಗಿ ತಕ್ಷಣವೆ ಗರುಡ ವಾಹನ ಗಸ್ತು ಮಾಡಿ ವಾಚ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಇನ್ನಾ‌ ಗಾಂಜಾ ಸೇದುವ ಸ್ಥಳ ಯಾವುದೆಂದು ಗೊತ್ತಾಗಿದೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶ್ರೀವತ್ಸ ಭರವಸೆ ನೀಡಿದರು.

ಈ ಭಾಗದಲ್ಲಿ ಎರಡು ಕಡೆ ರಸ್ತೆ ಕಾಮಗಾರಿ ನಡೆದಿಲ್ಲ. ಹಾಗೂ ಒಳಚರಂಡಿ ಸಮಸ್ಯೆ ಇದೆ,ಎಲ್ಲೆಂದರಲ್ಲಿ ಕಸ‌ ಸುರಿಯುತ್ತಾರೆ ಎಂಬ ದೂರುಗಳು ಬಂದಿವೆ. ರಸ್ತೆ ನಿರ್ಮಾಣ ಹಾಗೂ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ವಿಶ್ವ, ಪಿ.ಟಿ ಕೃಷ್ಣ, ರವಿ, ಮಧು, ಜೈರಾಮ್, ಪ್ರದೀಪ್ ಕುಮಾರ್, ಕಿಶೋರ್, ಶಶಿ, ಮತ್ತಿತರರು ಹಾಜರಿದ್ದರು.