ಮೈಸೂರು: ಅಂಗವಿಕಲರನ್ನು ಸಾಮಾನ್ಯರಂತೆ ಕಾಣಬೇಕು ಎಂದುರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್ ಜೈನ್ ಮನವಿ ಮಾಡಿದರು.

ನಗರದ ಕ್ಷೇಮ ವಿಶೇಷ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿಕಲಚೇತನರ ಬಗ್ಗೆ ಅನುಕಂಪ ತೋರುವ ಅಗತ್ಯವಿಲ್ಲ,ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಪ್ರಾರ್ಥನೆಯನ್ನು ನೃತ್ಯದ ಮೂಲಕ ವಿದ್ಯಾರ್ಥಿ ಚಾರು ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವಾಗಿತ್ತು.
ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ 60 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪುಟಾಣಿಗಳಿಂದ ವೇಷಭೂಷಣ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಾನಸಗಂಗೋತ್ರಿ ಕಾಲೇಜಿನ ಎಂ ಎಸ್ ಸಿ ವಿದ್ಯಾರ್ಥಿಗಳು, ವಿದ್ಯಾ ವಿಕಾಸ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯವಿಕಾಸ ಕಾಲೇಜಿನ ಉಪನ್ಯಾಸಕ ಜೈ ಸಂತೋಷ್ ನಾಯಕ್, ಸಮಾಜ ಸೇವಕರಾದ ಗಗನ್ ದೀಪ್ ಮತ್ತು ಮಹಾನ್ ಶ್ರೇಯಾಸ್ ಹಾಗೂ ಕ್ಷೇಮ ವಿಶೇಷ ಶಾಲೆಯ ಸಂಸ್ಥಾಪಕರಾದ ನೀಲಾಮಣಿ ಎಂ ಮತ್ತು ಕ್ಷೇಮ ವಿಶೇಷ ಶಾಲೆಯ ಶಿಕ್ಷಕ ವೃಂದ ಪಾಲ್ಗೊಂಡಿದ್ದರು.