ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಯುವಕ

Spread the love

ಮೈಸೂರು: ಕಾರನ್ನ ತೆಗಿ ಎಂದು ಹೇಳಿದ ಕರ್ತವ್ಯ ನಿರತ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಯುವಕ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ.

ದೇವರಾಜ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಪುಟ್ಟರಾಜು ಎಂಬುವರು ಹಲ್ಲೆಗೊಳಗಾಗಿದ್ದಾರೆ.

ಕೆ.ಸಿ.ಲೇಔಟ್ ನ ನಿವಾಸಿ ಪ್ರೀತಂ ಹಲ್ಲೆ ನಡೆಸಿದ ಯುವಕ.

ನಿನ್ನೆ ತಡರಾತ್ರಿ ಜಯಮಾರ್ತಾಂಡ ಗೇಟ್ ಬಳಿ ಪ್ರೀತಂ ಕಾರನ್ನ ನಿಲ್ಲಿಸಿದ್ದ.ತಡರಾತ್ರಿ ಆದರೂ ಕಾರು ನಿಲ್ಲಿಸಿದ್ದರ ಬಗ್ಗೆ ಪ್ರಶ್ನಿಸಿದ ನೈಟ್ ಬೀಟ್ ನಲ್ಲಿದ್ದ ಪುಟ್ಟರಾಜು ಅವರು ಕಾರನ್ನು ತೆಗೆಯುವಂತೆ ತಿಳಿಸಿದ್ದಾರೆ.

ಈ ವೇಳೆ ಪುಟ್ಟರಾಜು ಜತೆ ವಾದ ಮಾಡಿದ ಪ್ರೀತಂ ಏಕಾಏಕಿ ಹಲ್ಲೆ ನಡೆಸಿದ್ದಾನೆ.ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರೀತಂ ನನ್ನು ವಶಕ್ಕೆ ಪಡೆದರು.

ಪ್ರೀತಂ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರನ್ನ ಸೀಜ್ ಮಾಡಲಾಗಿದೆ.