ಮೈಸೂರು: ಯಾದವ್ ಹರೀಶ್ ಅವರನ್ನು ಅಖಿಲ ಭಾರತ ದತ್ತಿ ಸಂಸ್ಥೆಗಳ ಒಕ್ಕೂಟದ ಮೈಸೂರು ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಅಖಿಲ ಭಾರತ ದತ್ತಿ ಸಂಸ್ಥೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷೆ ಡಾ. ಅನುರಾಧಾ ಸುನಿಲ್ ಅವರ ಮಾರ್ಗದರ್ಶನದಲ್ಲಿ ಈ ಆಯ್ಕೆ ಮಾಡಲಾಗಿದೆ.
ಮಹದೇವ ಎಂ ಡಿ ರಾಷ್ಟ್ರೀಯ ಉಪಾಧ್ಯಕ್ಷರು, ರಾ. ಸುರೇಶ್ ಕುಮಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,
ನಾ. ಮರಿಯಪ್ಪನ್ ಅಖಿಲ ಭಾರತ ಸಂಯೋಜಕರು, ಅಬ್ದುಲ್ ಅಮೀದ್ ರಾಷ್ಟ್ರೀಯ ಖಜಾಂಚಿ,ಮನುಜ ಎಸ್ ಆರ್ ರಾಷ್ಟ್ರೀಯ ಮಹಿಳಾ ವಿಭಾಗದ ಕಾರ್ಯದರ್ಶಿ,ದಿವ್ಯಶ್ರೀ ರಾಷ್ಟ್ರೀಯ ದಕ್ಷಿಣ ವಲಯ ಸಂಯೋಜಕರು, ಮೇರಿ ಲೋಬೊ ಕರ್ನಾಟಕ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಹಾಗೂ ಗಿರೀಶ್ ಕೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇವರುಗಳ ಸಲಹೆಯ ಮೇರೆಗೆ ಯಾದವ್ ಹರೀಶ್ ಅವರನ್ನು ಮೈಸೂರು ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.