ಮೈಸೂರು: ಮೈಸೂರು ವಲಯ ಚಲನಚಿತ್ರ ವಿತರಕರ ಸಂಘದ 2025-26 ನೇ- ಸಾಲಿನ ವಾರ್ಷಿಕ ಚುನಾವಣೆಯು ಚುನಾವಣಾ ಅಧಿಕಾರಿ ರಂಗಪ್ಪ ಅವರ ಸಮ್ಮುಖದಲ್ಲಿ ನಡೆದು ಕೆಲವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಚುನಾವಣೆಯಲ್ಲಿ 2025-26 ನೆ ಸಾಲಿಗೆ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
H .R.ಹೊನ್ನಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ಬಿ.ಎಸ್. ಜಯತೀರ್ಥ, ಕಾರ್ಯದರ್ಶಿ ಬಿ.ಪಿ ರಾಮೇಗೌಡ, ಖಜಾಂಚಿ ಗಣೇಶ್ ಕೃಪಾ ಬಾಬು ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ಜಯರಾಮ್,ಕೆ. ಟಿ .ಸುರೇಶ್, ಚಂದನ್, ಎಂ.ವಿ.ರಾಜೇಂದ್ರ, ಮಹದೇವ್ ಶೆಟ್ಟಿ ಆಯ್ಕೆಯಾದರು
ಚುನಾವಣೆಯಲ್ಲಿ ಸದಸ್ಯರುಗಳಾದ ನಂದೀಶನಾಯಕ,ನಾಗೇಂದ್ರ. ಸಿ, ಎಸ್.ನರೇಂದ್ರಬಾಬು,ಶಂಕರ್, ಸಿದ್ದೇಗೌಡ್ರು ಮುಂತಾದವರು ಪಾಲ್ಗೊಂಡಿದ್ದರು.