ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಅಂಕಪಟ್ಟಿ‌‌ ಹಿಂತಿರುಗಿಸಿದ ಕುಲಸಚಿವೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ
ಅಂಕಪಟ್ಟಿ ನೀಡಿಲ್ಲವೆಂದು ಆರೋಪಿಸಿ ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಕುಲಸಚಿವರಾದ ಎಂ.ಕೆ.ಸವಿತಾ ಅವರು ಅಂಕಪಟ್ಟಿ ಹಿಂತಿರುಗಿಸಿದರು.

2021-22 ನೇ ಸಾಲಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಭಾ, ಕೋವಿಡ್ ಕಾರಣ ಕಾಲೇಜಿನ ಶುಲ್ಕ ಪಾವತಿಸಿರುವ ಬಗ್ಗೆ ಚಲನ್ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ.

ಚಲನ್ ಹಾಜರುಪಡಿಸಿ, ಯಾವುದೇ ಲಂಚ ಆರೋಪ ಮಾಡಿಲ್ಲವೆಂದು ಕುಲಸಚಿವರಾದ ಎಂ.ಕೆ. ಸವಿತಾಗೆ ವಿದ್ಯಾರ್ಥಿನಿ ಮನವಿ ಸಲ್ಲಿಕೆ ಮಾಡಿದರು.

ಇದನ್ನು ಪರಿಶೀಲಿಸಿ ಬಾಕಿ ಶುಲ್ಕ ಪಾವತಿ ಬಳಿಕ ವಿದ್ಯಾರ್ಥಿನಿಯ ಅಂಕಪಟ್ಟಿ ಹಿಂದಿರುಗಿಸಲಾಯಿತು.

ಜತೆಗೆ ಇಂತಹ ಸಮಸ್ಯೆಗಳಿದ್ದಾಗ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ಸಹಾಯ ಪಡೆಯುವಂತೆ‌ ವಿದ್ಯಾರ್ಥಿನಿ ಪ್ರಭಾಗೆ ಕುಲಸಚಿವೆ ಸಲಹೆ ನೀಡಿದರು.