ಮೈಸೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿಯ ಕಿಡಿ ಸಿಡಿದು ಹಲವಾರು ಮನೆಗಳಲ್ಲಿ ಟಿವಿ , ರೆಫ್ರಿಜರೇಟರ್ ಗಳು ಸುಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೋಚನಹಳ್ಳಿ ಗ್ರಾಮದಲ್ಲಿ ಈ ಅವಘಡ ನಡೆದಿದ್ದು,ಭಾನುವಾರ ಮಧ್ಯರಾತ್ರಿ ಟ್ರಾನ್ ಫಾರ್ಮ್ ನಲ್ಲಿ ಭಾರಿ ಬೆಂಕಿ ಕಾಣಿಸಿದೆ. ಇದರಿಂದ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿದೆ.
ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮಿಷನ್ ಸೇರು ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದೆ,ಜತೆಗೆ ಹಲವಾರಿಗೆ ಕರೆಂಟ್ ಶಾಕ್ ಆಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗ್ರಾಮದಲ್ಲಿನ ಟ್ರಾನ್ಸ್ ಫಾರ್ಮರ್ ನಲ್ಲಿ ತೊಂದರೆ ಆಗುತ್ತಿದೆ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಚೆಸ್ಕಾಂ ಗೆ ಹಲವಾರು ಬಾರಿ ಮನವಿ ಮಾಡಿದ್ದರು.
ಆದರೆ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ,ಪುಣ್ಯಕ್ಕೆ ಇಷ್ಟರಲ್ಲೇ ಮುಗಿದಿದೆ ಸಾವು,ನೋವು ಸಂಭವಿಸಿದ್ದರೆ ಏನು ಮಾಡಬೇಕಿತ್ತು ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.