ಐಟಿಸಿ ಕಂಪನಿಯ ಜನಪರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಯತಿಂದ್ರ ಸಿದ್ದರಾಮಯ್ಯ

Spread the love

ತಾಂಡವಪುರ: ಐಟಿಸಿ ಕಂಪನಿ ಅವರ ಸಾರ್ವಜನಿಕ ಜನಪರ ಕಾರ್ಯಕ್ರಮಗಳ ಸೇವೆಗೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಐ ಟಿ ಸಿ ಕಂಪನಿ ಸಿಎಸ್ಆರ್ ನಿಧಿಯಿಂದ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಅವರ ಈ ಸೇವೆ ಶ್ಲಾಘನೀಯ ಎಂದು ಹೇಳಿದರು.

ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿ ಗ್ರಾಮದಲ್ಲಿ ಐ ಟಿ ಸಿ ಕಂಪನಿ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಡಾ. ಯತಿಂದ್ರ ಉದ್ಘಾಟಿಸಿ ಮಾತನಾಡಿದರು.

ಐಟಿಸಿ ಕಂಪನಿಯವರು ನಮ್ಮ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಗಮನ ಹರಿಸಿ ಸಾರ್ವಜನಿಕರ ಬೇಡಿಕೆಗೆ ಸಹಕಾರ ನೀಡುತ್ತಿದೆ. ಕಂಪನಿಯ ಈ ಸೇವೆಗೆ ನಾವು ಆಭಾರಿಯಾಗಿದ್ದು ಕಂಪನಿಯವರು ಇದೇ ರೀತಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಹಾರೈಸಿದರು.

ಕಂಪನಿ ಆಡಳಿತ ಮಂಡಳಿಯ ಅಧಿಕಾರಿ ಗೌತಮ್ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಇನ್ನು ಹೆಚ್ಚಿನ ಪ್ರೀತಿಯಲ್ಲಿ ಸಾರ್ವಜನಿಕರ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಚನಹಳ್ಳಿ ಎಂ ಮಹದೇವು, ರಾಜಮ್ಮ, ಕಂಪನಿ ಆಡಳಿತ ಮಂಡಳಿ ಅಧಿಕಾರಿ ಗೌತಮ್, ಬಗರ್ ಹುಕುಂ ಸಮಿತಿಯ ಸದಸ್ಯ ಯಬ್ಯಾ ರಾಜಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಜುಳಾ ಮಂಜುನಾಥ್, ಮಾಜಿ ಸದಸ್ಯರಾದ ಗುರುಸ್ವಾಮಿ ಎಂ ಟಿ, ರವಿಕುಮಾರ್, ರಂಗಯ್ಯ,ಗ್ರಾಮದ ಮುಖಂಡರಾದ ಗುರುಮೂರ್ತಿ, ಶಂಕರ್, ಕಾಳಯ್ಯ, ಮುಖಂಡರಾದ ಚಂದ್ರಶೇಖರ್, ಮೇಲಹಳ್ಳಿ ರಮೇಶ್, ಮಾಕನ ಹುಂಡಿ ರವಿ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮ ಪಂಚಾಯತ್ ಸದಸ್ಯರು ಅಧಿಕಾರಿಗಳು ಹಾಜರಿದ್ದರು.