ಮೈಸೂರು, ಏ.7: ಮೈಸೂರಿನ ಯಾದವ ಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠ
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀಸತ್ಯಪ್ರಮೋದ ಕಲ್ಯಾಣಮಂಟಪದಲ್ಲಿ
ವಿವಿಧ ಕಾಮಾಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಂದಾಜು 70 ಲಕ್ಷದ ವೆಚ್ಚದ ಪೂಜಾ ಹಾಲ್, ಒಂದು ಹೋಮ ಶಾಲೆ, ಸಾರ್ವಜನಿಕರ ಅನುಕೂಲಕ್ಕಾಗಿ ಆರು ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲರಾದ ಪಂ. ಡಾ|| ಸತ್ಯಧ್ಯಾನಾಚಾರ್ಯ ಕಟ್ಟಿ ಅವರು,
ದೇವರ ಸನ್ನಿಧಾನಕ್ಕೆ ಬರುವಾಗ ಶುದ್ಧ ಮನಸ್ಸು, ಸೇವಾ ಮನೋಭಾವದಿಂದ ಬಂದರೆ ಖಂಡಿತ ಉತ್ತಮ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿಗಳು ಪಂ. ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ್,
ಶ್ರೀಮದುತ್ತರಾದಿ ಮಠ ವ್ಯವಸ್ಥಾಪಕರಾದ ಪಂ. ಶ್ರೀ ಅನಿರುದ್ದಾಚಾರ್ಯ ಪಾಂಡುರಂಗಿ, ಅನಿಲ್ ಕೆಂಭಾವಿ, ಎ ಎಸ್ ಮೂರ್ತಿ,ಎಸ್. ಬಿ ವಾಸುದೇವಮೂರ್ತಿ,ಶರತ್ ಚಂದ್ರ, ಮಠದ ವ್ಯವಸ್ಥಾಪಕರಾದ ಪ್ರಮೋದ್ ಆಚಾರ್, ಭುಜಂಗ ಮತ್ತಿತರರು ಹಾಜರಿದ್ದರು.