ವಿದೇಶದಲ್ಲೂ ಮೈಸೂರಿಗೆ ಕೀರ್ತಿ ತಂದತಾತಯ್ಯ ಅನಾಥಾಲಯದ ವಿದ್ಯಾರ್ಥಿಗಳು-ಶ್ರೀವತ್ಸ

Spread the love

ಮೈಸೂರು: ತಾತಯ್ಯ ಅನಾಥಾಲಯದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ ವಿದೇಶದಲ್ಲೂ ಮೈಸೂರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶಾಸಕ ಟಿಎಸ್. ಶ್ರೀವತ್ಸ ನುಡಿದರು.

ಮೈಸೂರು ಸಂಸ್ಥಾನದಲ್ಲಿ ಸಂಸ್ಕಾರ ಸಂಸ್ಕೃತಿ ಹೆಚ್ಚಾಗಲು ತಾತಯ್ಯ ಅವರ ಶೈಕ್ಷಣಿಕ ಯೋಜನೆ ಮುನ್ನುಡಿ ಬರೆಯಿತು ಹೇಳಿದರು.

ವೃದ್ಧಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ಅವರ181ನೇ ಜಯಂತಿಯನ್ನು ಅನಾಥಾಲಯ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರಿನ ತಾತಯ್ಯ ಉದ್ಯಾನವನದಲ್ಲಿ ಆಚರಿಸಿದ ವೇಳೆ ಶ್ರೀವತ್ಸ ಅವರು ತಾತಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರು ಮೈಸೂರಿಗೆ ಬಂದಾಗ the old man of mysore empire ಎಂದು ಬಣ್ಣಿಸಿದ್ದರು, ದಯಾಸಾಗರ ತಾತಯ್ಯನವರು ಸ್ವತಃ ಶಿಕ್ಷಕರಾಗಿದ್ದರು ಅವರ ಅನಾಥಾಲಯದಲ್ಲಿ ಶಿಕ್ಷಣ ಪಡೆದ ಬಹುತೇಖ ಮಂದಿ ಇಂದು ದೇಶ ವಿದೇಶದಲ್ಲಿ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಮೈಸೂರಿನ ಹೆಮ್ಮೆ ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಶಿಕ್ಷಣ ಕಾಶಿ ಮೈಸೂರು ವಿಶ್ವವಿದ್ಯಾನಿಲಯ ಮುಂದೆ ತರಲು ಯೋಜನೆ ರೂಪಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಮಾರ್ಗದರ್ಶನ, ಸ್ಪೂರ್ಥಿ ನೀಡಿದವರೇ ತಾತಯ್ಯನವರು ಎಂದು ತಿಳಿಸಿದರು.

ಮೈಸೂರಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳು, ಸಹಕಾರಿ ರಂಗ, ವೈದ್ಯಕೀಯ ಕ್ಷೇತ್ರ, ಕಾರ್ಖಾನೆಗಳು ಸೇವಾಕ್ಷೇತ್ರವಾಗಿತ್ತು ಬಡವರ ಬದುಕು ಕಟ್ಟಿಕೊಳ್ಳಲು ಆಸರೆಯಗಿತ್ತು ಆದರೆ ಇಂದು ವ್ಯಾಪಾರಿವಲಯವಾಗಿ ಸೇವಾ ಕ್ಷೇತ್ರಗಳು ಬಣ್ಣಬದಲಾಯಿಸಿವೆ ಅಂತವರು ತಾಯತ್ಯ ನವರ ಜೀವನಚರಿತ್ರೆ, ಆದರ್ಶಗಳನ್ನು ಪಾಲಿಸಿ ಸೇವಾಮನೋಭವಾದೊಂದಿಗೆ ಮಾದರಿಯಾಗಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನಂತರ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಅವರು ಮತನಾಡಿ ಸಾಧಾರಣ ಶಿಕ್ಷಕರಾಗಿದ್ದ ತಾತಯ್ಯನವರಿಗೆ ಸರ್ಕಾರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿದೆ, ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ನಗರ ಪಾಲಿಕೆ ಮತ್ತು ಅನಾಥಾಲಯ ಹಳೆಯ ವಿದ್ಯಾರ್ಥಿ ಸಂಘದವರು ತಾತಯ್ಯ ಜನ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದಾರೆ, ತಾತಯ್ಯನವರಿಗೆ ದಕ್ಷಿಣದ ಬಾಲಗಂಗಾಧರ ತಿಲಕ್ ಹಾಗೂ ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ಎಂದೇ
ಕರೆಯಲಾಗಿದೆ ಎಂದು ಬಣ್ಣಿಸಿದರು.

ಮಹಾತ್ಮರಾದ ತಾತಯ್ಯ ಅವರ ಜಯಂತಿಯನ್ನು ಮುಂದಿನ ವರ್ಷದಿಂದ ಪುರಭವನದಲ್ಲಿ ಆಚರಿಸಲು ನಗರಪಾಲಿಕೆ ಮತ್ತು ಜಿಲ್ಲಾಡಳಿತ ಮುಂದಾಗಬೇಕು ಹಾಗೂ ಸಮಾಜದಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ ಗುರುತಿಸಿ “ತಾತಯ್ಯ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತಾತಯ್ಯ ಹಳೇವಿದ್ಯಾರ್ಥಿಗಳ ಸಂಘದ ಸಂಚಾಲಕ ಸುಂದರೇಶ್ ಅವರು ಮಾತನಾಡಿ ಹಳೇ ಮೈಸೂರು ಸಂಸ್ಥಾನದಲ್ಲಿ ಮಾಧ್ಯಮ ಸಂಪರ್ಕವಿಲ್ಲದ ಕಾಲದಲ್ಲಿ ದುಡಿಮೆ ಮತ್ತು ಶಿಕ್ಷಣ ಬಹಳ ಕಷ್ಟಕರವಾಗಿತ್ತು ಕನ್ನಡದ ಸಣ್ಣ ಪುಟ್ಟ ಪತ್ರಿಕೆಗಳನ್ನು ಪ್ರಾರಂಭಿಸಿದ ತಾತಯ್ಯ ಅವರು ‘ಹಿತಬೋಧಿನಿ ‘ಸಾಧ್ವಿ’ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನು ಹೊರ ತರುವುದರೊಂದಿಗೆ ಸಾಮನ್ಯವ್ಯಕ್ತಿಯ ಬದುಕಿಗೆ ಸ್ಪೂರ್ಥಿಯಾದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಚೇತನ್, ಪ್ರದೀಪ್, ಸುಚೀಂದ್ರ, ಚಕ್ರಪಾಣಿ, ಸಚಿನ್ ನಾಯಕ ಮುಂತಾದವರು ಪಾಲ್ಗೊಂಡಿದ್ದರು.