ಮೈಸೂರು: ಕಂಪ್ಯೂಟರ್ ಟೀಚರ್ ಒಬ್ಬರಿಗೆ ವುದ್ಯಾರ್ಥಿಯೇ ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ವಂಚಿಸಿದ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಚನೆಗೆ ಒಳಗಾದ ಶಿಕ್ಷಕಿ ವಿದ್ಯಾರ್ಥಿ ಮತ್ತು ಆತನ ಪತ್ನಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನ ರೈಲ್ವೆ ಬಡಾವಣೆ ನಿವಾಸಿ ಪ್ರೀತಾ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರು.
ಶಿಕ್ಷಕಿಯು ವಿದ್ಯಾರ್ಥಿಯ ನಯವಾದ ಮಾತುಗಳನ್ನ ನಂಬಿ ಹಣ ಅಲ್ಲದೆ ಚಿನ್ನಾಭರಣಗಳನ್ನೂ ಕಳೆದುಕೊಂಡಿದ್ದಾರೆ.
ಬೋಗಾದಿಯ ವಿಜಯ್ ವಾಸುದೇವನ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ವಿರುದ್ಧ ದೂರು ನೀಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ಪ್ರೀತಾ 2005 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಎಸ್.ಎಸ್.ಐ.ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದರು.
ಪ್ರೀತಾ ಅವರ ಪತಿ ಮುರಳಿ ಕೃಷ್ಣನ್ ಅವರು ನಿಧನರಾದರು.ಕೆಲವು ವರ್ಷಗಳ ಹಿಂದೆ ವಿಜಯ್ ವಾಸುದೇವನ್ ಅವರು ಪ್ರೀತಾ ಅವರನ್ನ ಪರಿಚಯ ಮಾಡಿಕೊಂಡು ನಿಮ್ಮ ಬಳಿ ಕಂಪ್ಯೂಟರ್ ತರಬೇತಿ ಪಡೆದಿದ್ದೇನೆ ನಿಮ್ಮ ಸ್ಟೂಡೆಂಟ್ ಎಂದು ಹೇಳಿದ್ದಾನೆ.
ಪರಿಚಯವಾದ ನಂತರ ಪ್ರೀತಾರನ್ನ ಮನೆಗೆ ಆಹ್ವಾನಿಸಿದ ವಿಜಯ್ ವಾಸುದೇವ್ ಪತ್ನಿ ಜೆನೆಟ್ ಜನ್ನೀಫರ್ ರನ್ನು ಪರಿಚಯಿಸಿದರು.
ಆತ ಆಗಾಗ ಮನೆಗೆ ಬಂದು ಮಕ್ಕಳಿಗೆ ತಿಂಡಿ ಬಟ್ಟೆ ಕೊಡಿಸುವುದು,ಕಾರ್ ನಲ್ಲಿ ಓಡಾಡಿಸುವುದು ಸೇರಿದಂತೆ ಐಷಾರಾಮಿ ಜೀವನದ ರುಚಿ ತೋರಿಸಿದದ್ದಾರೆ.
ತಾನು ಸ್ಪಾಟ್ 01 ಎಂಬ ಕಂಪನಿ ನಡೆಸುತ್ತಿದ್ದು ಇದರಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಬರುತ್ತದೆಂದು ವಾಸುದೇವನ್ ನಂಬಿಸಿದರು.ಪ್ರೀತಾ ರವರ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಪಾಸ್ ವರ್ಡ್ ಗಳನ್ನ ಬದಲಾಯಿಸಿಕೊಂಡು ತಾವೇ ನಿರ್ವಹಣೆ ಮಾಡುವ ಹಂತ ತಲುಪಿದ್ದನೆಂದು ಪ್ರೀತಾ ದೂರಿನಲ್ಲಿ ತಿಳಿಸಿದ್ದಾರೆ
.ಪ್ರೀತಾ ಅವರ ಸಂಪೂರ್ಣ ಮಾಹಿತಿ ಪಡೆದುಕೊಂಡ ವಿಜಯ್ ವಾಸುದೇವ್ ಹಲವಾರು ಫೈನಾನ್ಸ್ ಗಳಲ್ಲಿ ಲಕ್ಷ ಲಕ್ಷ ಹಣ ಸಾಲ ಪಡೆದಿದ್ದಾರೆ.
ಎಲ್ಲವೂ ಪ್ರೀತಾ ಅವರ ಖಾತೆಯಿಂದಲೇ ವಹಿವಾಟು ನಡೆದಿದೆ.ಅತಿಯಾದ ನಂಬಿಕೆ ಹುಟ್ಟಿಸಿದ್ದ ವಿಜಯ್ ವಾಸುದೇವನ್ ಐಡಿಎಫ್ ಸಿ,ಹೆಚ್.ಡಿ.ಎಫ್ ಸಿ,ಡಿಎಂ ಐ,ಚೋಳಮಂಡಳಮ್ ಫೈನಾನ್ಸ್ ಸೇರಿದಂತೆ ಹಲವು ಫೈನಾನ್ಸ್ ಗಳಲ್ಲಿ ಲಕ್ಷಾಂತರ ಹಣ ಸಾಲ ಕ್ರೆಡಿಟ್ ಮಾಡಿಸಿದರು.ನಂತರ ಆ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದರು.
ನಂತರ ಪ್ರೀತಾ ಬಳಿಯಿದ್ದ 714 ಗ್ರಾಂ ಚಿನ್ನಾಭರಣವನ್ನ ಖಾಸಗಿ ಸಂಸ್ಥೆಯಲ್ಲಿ ಗಿರವಿ ಇಡಿಸಿ 38 ಲಕ್ಷ ಹಣ ಸಹ ಪಡೆದುಕೊಂಡಿದ್ದರು.ಇದು ಸಾಲದೆಂಬಂತೆ ಪ್ರೀತಾ ಅವರ ಹೆಸರಿನಲ್ಲಿದ್ದ ಎರಡು ಮನೆಗಳನ್ನ ಮಾರಿಸಿದ್ದರು.ಲಕ್ಷಾಂತರ ಹಣ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ಹೆಸರಿಗೆ ವರ್ಗಾವಣೆ ಆಗಿತ್ತು.ಇವೆಲ್ಲವನ್ನೂ ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದ್ದಾರೆ.
ಒಂದು ದಿನ ಲಾಭದ ಹಣ ನೀಡುವಂತೆ ಕೇಳಿದಾಗ ದಂಪತಿ ಉಲ್ಟಾ ಹೊಡೆದಿದ್ದಾರೆ.ಬೆಂಗಳೂರಿನಲ್ಲಿ ಮನೆ ಖರೀದಿಸಿರುವುದಾಗಿ ತಿಳಿಸಿ ಆ ಮನೆಯನ್ನೂ ಸಹ ಮಾರಾಟ ಮಾಡಿಸಿದ್ದಾರೆ.ಇವೆಲ್ಲಾ ವಹಿವಾಟುಗಳ ಮಧ್ಯೆ ಪ್ರೀತಾರವರು 50 ಲಕ್ಷಕ್ಕೂ ಅಧಿಕ ಮೊತ್ತ ಕಳೆದುಕೊಂಡಿದ್ದಾರೆ.
ಅಲ್ಲದೆ 38 ಲಕ್ಷ ಮೌಲ್ಯದ ಚಿನ್ನಾಭರಣ ಸಹ ಕೈತಪ್ಪಿಹೋಗಿದೆ.ಹಣದ ವಿಚಾರ ತೆಗೆದಾಗ ದಂಪತಿ ಕೊಲೆ ಬೆದರಿಕೆ ಹಾಕಿದ್ದಾರೆ.ತನ್ನ ಹೆಸರಲ್ಲಿ ಹಲವಾರು ಸುಳ್ಳುದಾಖಲೆಗಳನ್ನ ಸೃಷ್ಟಿಸಿ ಹಲವಾರು ಫೈನಾನ್ಸ್ ಗಳಲ್ಲಿ ಸಾಲ ಪಡೆದು ವಂಚನೆ ಮಾಡಿದ್ದಾರೆ.
ನನ್ನ ಖಾತೆಯಿಂದ ಮನಿಲಾಂಡರಿಂಗ್ ಮಾಡಿದ್ದಾರೆಂದು ಆರೋಪಿಸಿರುವ ಪ್ರೀತಾ ಅವರು ತಮ್ಮ ಸ್ಟೂಡೆಂಟ್ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜೆನ್ನಿಫರ್ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.