ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ

Spread the love

ಮೈಸೂರು:‌ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಮೈಸೂರು ಜಿಲ್ಲೆಯಲ್ಲಿ ಒಟ್ಟು 37,904 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪುನರಾವರ್ತಿತರು ಸೇರಿಸಿದರೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 39,103 ಆಗುತ್ತದೆ.

133 ಪರೀಕ್ಷೆ ಕೇಂದ್ರಗಳು ಜಿಲ್ಲೆಯಲ್ಲಿದ್ದು, ಬಾಲಕರು- 19,114, ಬಾಲಕಿಯರು- 18,190.ಈ ಬಾರಿ ಜಿಲ್ಲೆಯಲ್ಲಿ ಒಂದೂ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿಲ್ಲದಿರುವಯದು ವಿಶೇಷ.

ಪರೀಕ್ಷೆಯನ್ನು ವೆಬ್‌ ಕಾಸ್ಟಿಂಗ್‌ ಮಾಡಲಾಗುತ್ತಿದ್ದು,ಎಲ್ಲಾ ಪರೀಕ್ಷಾ ಕೇಂದ್ರಗಳ ವೆಬ್ ಕಾಸ್ಟಿಂಗ್‌ ಅನ್ನು ಅಧಿಕಾರಿಗಳು ಗಮನಿಸಲಿದ್ದಾರೆ.

21 ನೋಡಲ್​ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಕ್ಷಣೆ ಮಾಡಲಿದ್ದಾರೆ.

ಬೆಂಗಳೂರಿನ SSLC ಬೋರ್ಡ್​ನಲ್ಲೂ ಅಧಿಕಾರಿಗಳು ಗಮನಿಸಲಿದ್ದಾರೆ

ಪರೀಕ್ಷೆ ಆರಂಭವಾದ ವೇಳೆಯಿಂದ ಮುಗಿಯುವ ತನಕ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಗೆ ಚೆಸ್ಕಾಂಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಕ್ಕಳ ಆರೋಗ್ಯ ತಪಾಸಣೆಗೆ ತಾಲೂಕು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳ ಸಹಕಾರ ಕೂಡಾ ಪಡೆಯಲಾಗಿದೆ.

ವಿದ್ಯಾರ್ಥಿಗಳು ತಮ್ಮ ಕೊಠಡಿ ಹಾಗೂ ಸಂಖ್ಯೆಗಳನ್ನು ಬೋರ್ಡ್ ನಲ್ಲಿ ನೋಡಿ ಧೃಡ ಪಡಿಸಿಕೊಂಡರು.

ಬೆಳಿಗ್ಗೆ ಪರೀಕ್ಷೆ ಪ್ರಾರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ ಅಂತಿಮ ತಾಲೀಮು ಮಾಡಿದರು.

ನಂತರ‌ ಸಾವಕಾಶವಾಗಿ ಪರೀಕ್ಷೆ ಬರೆಯಲಾರಂಭಿಸಿದರು.