ಮೈಸೂರಿನ ‌ಸಹೋದರಿಯರ ಗಾನ ಸಿಂಚನ

Spread the love

ಮೈಸೂರು: ಮೈಸೂರಿನ ಸಹೊದರಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ಅವರ ಭಕ್ತಿ ಗಾಯನ, ಮೈಸೂರು‌ ಗುರುರಾಜ್ ರವರ ಜಾನಪದ ಗಾಯನಗಳು ಅಂಬಾವಿಲಾಸ ಅರಮನೆ ಆವರಣದಲ್ಲಿ 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ತೆರೆಕಂಡಿತು.

ವಾತಾಪಿ ಗಣಪತಿಂ ..ಭಜೇ ಅಹಂ ಎಂಬ ಗಣಪತಿ ಸ್ತುತಿಯ ಮೂಲಕ ತಮ್ಮ‌ಗಾಯನ ಲಹರಿ‌ ಹರಿಸಿದ ಮೈಸೂರು ಮೂಲದ ಖ್ಯಾತ ಹಿನ್ನೆಲೆ ಗಾಯಕಿಯರು ಸಂಗೀತ ಗಾರರರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ಪ್ರೇಕ್ಷಕರ ಮನಸೂರೆಗೊಂಡರು.

ಶ್ರೀ ಚಾಮುಂಡೇಶ್ವರಿ … ಅಮ್ಮಾ..ಪುರಂದರ ದಾಸರ ಬೃಂದಾವನದೊಳು ಆಡಿದವನ್ಯಾರೆ…. ಇಂದು ಭುವನೇಶ್ವರಿಯ ನೆನೆ ಮನವೆ‌‌‌‌….ಸಾದನೆ ಪರಮಪದ….. ಹಾಡುಗಳು ಕವಿಗೆ ಇಂಪುನ್ನು ನೀಡಿದವು.

ಜಾನಪದ ಕಲಾವಿದ ಡಾ. ಮೈಸೂರು ಗುರುರಾಜ್ ಮತ್ತು ತಂಡದಿಂದ ಜಾನಪದ ಗಾಯನ ಅತ್ಯುದ್ಭತವಾಗಿ ಮೂಡಿಬಂದಿದ್ದು,
ಶರಣು ಶರಣ್ಣವ್ಯಯ್ಯ… ಗಣನಾಯಕ….ಹಾಡಿನ ಮೂಲಕ ಜಾನಪದ ಸೊಗಡನ್ನು ಪಸರಿಸಲು ಶುರು ಮಾಡಿದರು.
ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರರ ಪ್ರೇಮ ಪ್ರಸಂಗ ಕುರಿತ ಮೂಲ ಜಾನಪದ ಗೀತೆ, ಮಾದಪ್ಪನ ಕುರಿತ ..ಬೆಟ್ಡ ನುಡಿದಾವೋ ಮಾದೇವ.. ಬಿದಿರು ನುಡಿದಾವೋ.. ಗಾಯನದ ಜೊತೆ ಕಂಸಾಳೆ ನೃತ್ಯಕ್ಕೆ ನೆರೆದಿದ್ದವರು ಉಘೇ ಎಂದರು.

ತಿಂಗಳು ಮುಳುಗಿದವೋ.. ರಂಗೋಲಿ ಮೆರಗಿದವೋ.. ಮಂಟೇಸ್ವಾಮಿ ಕುರಿತ ಸಿದ್ದಯ್ಯ ಸ್ವಾಮಿ ಬನ್ನಿ…ಸಾರಿ ಹೇಳುವೆ, ಕೇಳಿ‌ ಶರಣರೆ ಕಲಿಗಾಲದ ಮಹಿಮೆಯನು….ಒಲಿದು ಬಾರೋನ್ನಯ್ಯ.. ಒಲಿದು ಬಾರೊ ಸಿದ್ದಯ್ಯ… ಹಾಡಿ ಭಕ್ತಿ ಭಾವದಲ್ಲಿ ಎಲ್ಲರನ್ನೂ ರಂಜಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ರವರ ಕೋರಿಕೆ ಮೇರೆಗೆ ಎಲ್ಲೋ ಜೋಗಪ್ಪ ನಿನ್ನ ಅರಮನೆ ಜಾನಪದ ಗೀತೆ ಹಾಡಿದ್ದು‌ ವಿಶೇಷವಾಗಿತ್ತು.

ಇದಕ್ಕೂ ಮುನ್ನ ಬೀದರ್ ಜಿಲ್ಲೆಯ ಜಾನಪದ ಕಲಾವಿದೆ ರೇಖಾ ಸವದಿ ಅವರು ಎಲ್ಲಿ ಕಾಣೇ ಎಲ್ಲಿ ಕಾಣೆನ ಎಲ್ಲಮ್ಮ.. ಹಾಗೂ ಇನ್ನಿತರ ಜನಾಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರೆ. ಜಯನಗರದ ಇಸ್ಕಾನ್ ದೇಗುಲದ ತಂಡದಿಂದ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ.. ಹರೇ ರಾಮ ..ಎಂದು ಹರಿನಾಮ ಸಂಕೀರ್ತನೆ ಮಾಡಿದಾಗ ಸಭಿಕರು ಸರಳವಾಗಿ ನೃತ್ಯ ಮಾಡಿ ಭಕ್ತಿ-ಭಾವದಲ್ಲಿ ಮಿಂದೆದ್ದರು.