ಬೆಳ್ಳಿ ಪದಾರ್ಥ ತಯಾರಿಕಾ ಗೋದಮಿನಲ್ಲಿ ದರೋಡೆ

Spread the love

ಮೈಸೂರು: ಬೆಳ್ಳಿ ಪದಾರ್ಥಗಳನ್ನು ತಯಾರಿಸುವ ಘಟಕಕ್ಕೆ ದರೋಡೆಕೋರರು ನುಗ್ಗಿ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 50 ಕೆ.ಜಿ. ಬೆಳ್ಳಿ ಆಭರಣ ದೋಚಿದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ
ರಾಕೇಶ್‌ ಎಂಬವರಿಗೆ ಸೇರಿದ ಬೆಳ್ಳಿಯ ಪದಾರ್ಥ ತಯಾರಿಸುವ ಗೋಡನ್ ನಲ್ಲಿ ಮಂಗಳವಾರ ಮಧ್ಯರಾತ್ರಿ ದರೋಡೆಕೋರರು ನುಗ್ಗಿದ್ದಾರೆ.

ಸೋಮವಾರ ರಾತ್ರಿಯಷ್ಟೇ 30 ಕೆ.ಜಿ ಬೆಳ್ಳಿಯನ್ನು ಆಭರಣವನ್ನಾಗಿ ಮಾಡಿ ಮಾಲೀಕರು ಮನೆಗೆ ಕೊಂಡೊಯ್ದಿದ್ದರು. ಉಳಿದದನ್ನು ಲಾಕರ್ ನಲ್ಲಿ ಇಟ್ಟು ಬೀಗ ಹಾಕಿ‌ ಹೋಗಿದ್ದರು.

ದರೋಡೆಕೋರರ ಕೈಗೆ 50 ಕೆ.ಜಿ. ಬೆಳ್ಳಿ ಮಾತ್ರ ಸಿಕ್ಕಿದೆ. ಉಳಿದದ್ದು ಲಾಕರ್ ನಲ್ಲಿ ಸೇಫ್ ಆಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ಕಟ್ಟಡದ ಮೇಲ್ಛಾವಣಿ ಓಪನ್ ಮಾಡಿ ಗೋಡೌನ್ ಪ್ರವೇಶ ಮಾಡಿದ್ದು,ಇಬ್ಬರು ಸೆಕ್ಯುರಿಟಿಗಳನ್ನ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ. 50 ಕೆ.ಜಿ. ಬೆಳ್ಳಿ ದೋಚಿದ್ದಾರೆ.