ಟೈಲರುಗಳಿಗೆ ಗುರುತಿನ ಕಾರ್ಡ್ ವಿತರಣೆ

Spread the love

ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ವಿನಯ ಮಾರ್ಗದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ) ವತಿಯಿಂದ ಟೈಲರ್ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು.

ಮೈಸೂರಿನ ಸಿದ್ದಾರ್ಥ ನಗರ ವಲಯ ಸಮಿತಿ ಸದಸ್ಯರಿಗೆ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮಹದೇವಮ್ಮ ಅವರು ಟೈಲರ್ ಐಡಿ ಕಾರ್ಡ್ ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೋಗ ಗುರು ಪುಟ್ಟ ಸ್ಟಾಮಣ್ಣ ಹಾಗೂ ಸಿದ್ದಾರ್ಥನಗರ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಅರುಣಾಕ್ಷಿ ಮತ್ತು ವಕೀಲರಾದ ಸ್ವಾಮಿ ಹಾಗೂ ಕೆ.ಎಸ್.ಟಿ.ಎ ಸಿದ್ದಾರ್ಥ ನಗರ ಬಡಾವಣೆ ವಲಯ ಸಮಿತಿಯ ಅಧ್ಯಕ್ಷೆ ಸುಮಬಾಯಿ ಅವರಿಗೆ ರಾಘವೇಂದ್ರ ನಗರ ವಲಯ ಸಮಿತಿ ಅಧ್ಯಕ್ಷರಾದ ಕೆ.ಜಾನ್ ಅವರು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರೇಣುಕ ಬಾಯಿ, ಗೌರವಾಧ್ಯಕ್ಷೆ ಲಕ್ಷ್ಮಿ.ಸಿ, ಕಾರ್ಯದರ್ಶಿ ದಮಯಂತಿ, ಉಪ ಕಾರ್ಯದರ್ಶಿ ಯಮುನ ಎಂ.ಎಲ್ ಹಾಗೂ ಬೋಗಾದಿ ವಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ ಮತ್ತು ಗೌರವ ಅಧ್ಯಕ್ಷ ಸಿದ್ದೇಗೌಡರು ಹಾಗೂ ರಾಮಕೃಷ್ಣ ನಗರ ವಲಯ ಸಮಿತಿ ಅಧ್ಯಕ್ಷ ಈರಣ್ಣ ಮತ್ತು ಬೀರ್ ಹುಂಡಿ ವಲಯ ಸಮಿತಿ ಕಾರ್ಯದರ್ಶಿ ಪುಷ್ಪ ಹಾಗೂ ರಾಜೇಂದ್ರ ನಗರ ವಲಯ ಸಮಿತಿ ಅಧ್ಯಕ್ಷ ಕೆ ಎಸ್ ಶಿವಕುಮಾರ್ ಮತ್ತು ರಾಘವೇಂದ್ರ ನಗರ ವಲಯ ಸಮಿತಿ ಅಧ್ಯಕ್ಷ ಕೆ. ಜಾನ್ ಹಾಗೂ ಸತ್ಯನಗರ ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಂಧ್ಯಾರಾಣಿ, ರೀಟ ಮತ್ತು ಸಿದ್ದಾರ್ಥ ನಗರ ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ರಾಣಿ ಹಾಗೂ ಕರ್ನಾಟಕ ಸ್ಟೇಟ್ ಟೈಲರ ಅಸೋಸಿಯೇಷ್ ನ್(ರಿ) ಸದಸ್ಯರು ಉಪಸ್ಥಿತರಿದ್ದರು.