ನಂಜನಗೂಡು: ಅಂಗಡಿ ಮುಂದೆ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಮಾಲೀಕನಿಗೆ ಇರಿದ ಕ್ಷುಲ್ಲಕ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಈ ಘಟನೆ ನಂಜನಗೂಡು ವಾಸುಕಿ ಪೆಟ್ರೋಲ್ ಬಂಕ್ ಬಳಿ ನಡೆದಿದ್ದು, ಗಾಯಗೊಂಡ ಗಿರೀಶ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕರಪುರ ಗ್ರಾಮದ ಯೋಗಿ ಹಾಗೂ ಹರ್ಷಿತ್ ಕಿರಣ್ ಮತ್ತು ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಅಂಗಡಿ ಮುಂದೆ ಬಂದ ಯೋಗಿ ಹಾಗೂ ಇತರರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದರು.ಅಂಗಡಿ ಮುಂದೆ ಗಲಾಟೆ ಮಾಡಿದರೆ ವ್ಯಾಪಾರಕ್ಕೆ ತೊಂದರೆ ಯಾಗುತ್ತದೆ ಎಂದು ಗಿರೀಶ್ ಹೇಳಿದ್ದಾರೆ.
ಅಷ್ಟಕ್ಕೆ ಕಿರಿಕ್ ಮಾಡಿ ಎಳೆದಾಡಿ ನೂಕಾಡಿ ಅವಾಚ್ಯ ಶಬ್ದಗಳಿಂದ ಆರೋಪಿಗಳು ನಿಂದಿಸಿದ್ದಾರೆ.
ಅರ್ಧ ಗಂಟೆಗೆ ಹರ್ಷಿತ್ ಕಿರಣ್ ಸಂಗಡಿಗ ರೊಡನೆ ಬಂದ ಯೋಗಿ ಮತ್ತೆ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾನೆ.ಜತೆಗೆ ಚಾಕುವಿನಿಂದ ಇರಿದಿದ್ದಾನೆ.
ಗಿರೀಶ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಯೋಗಿ,ಹರ್ಷಿತ್ ಕಿರಣ್ ಹಾಗೂ ಇತರರ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
